ಸಂಸದ ಡಾ.ಕೆ.ಸುಧಾಕರ್ ಊಟ ಬಡಿಸಿದರು. 
ಜಿಲ್ಲೆ

ಶಿವಗಂಗೆಯಲ್ಲಿ ಗಿರಿಜಾಕಲ್ಯಾಣೋತ್ಸವ

ದಾಬಸ್ ಪೇಟೆ: ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿ ಮತ್ತು ಪಾರ್ವತಿ ದೇವಿಯ ಗಿರಿಜಾಕಲ್ಯಾಣ ಮಹೋತ್ಸವ ಮಂಗಳವಾರ ನೆರವೇರಿತು. ಶ್ರೀ ಗಿರಿಜಾ ಕಲ್ಯಾಣೋತ್ಸವದ ಪ್ರಯುಕ್ತ ಶ್ರೀ ಗಂಗಾಧರೇಶ್ವರ ಸ್ವಾಮಿಗೆ ಪಂಚಾಮೃತ ಪೂಜೆ, ರುದ್ರಾಭಿಷೇಕ, ಮೃತ್ಯುಂಜಯ ಅಭಿಷೇಕ ನೆರವೇರಿಸಲಾಯಿತು. ಶ್ರೀ ಪಾರ್ವತಿ ದೇವಿಗೆ ಕುಂಕುಮ ಸೇವೆ, ತ್ರಿಶಕ್ತಿ ಸೇವೆ ಮಾಡಲಾಯಿತು. ಬಳಿಕ ದೇವತಾ ಮೂರ್ತಿಗಳನ್ನು ಸಿಂಗರಿಸಲಾಯಿತು.

ಕಕುದ್ಗಿರಿ ಶಿಖರದಲ್ಲಿ ಉದ್ಭವವಾಗಿದ್ದ ಗಂಗೆಯನ್ನು ಪೋಲಿಸ್ ಭದ್ರತೆಯಲ್ಲಿ ಅರ್ಚಕರು ಬೆಟ್ಟದಿಂದ ಕೆಳಗಿಳಿಸಿಕೊಂಡರು. ಬಳಿಕ ಕೇಂಪೇಗೌಡ ಹಜಾರದಲ್ಲಿ ಗಂಗೆಗೆ ಮುಜರಾಯಿ ಅಧಿಕಾರಿಗಳು ಮತ್ತು ಅರ್ಚಕರು ಪೂಜೆ ಸಲ್ಲಿಸಿದರು. ವಾದ್ಯ ಸಮೇತ ನಂದಿ ಧ್ವಜ ಕಲ್ಯಾಣ ಮಂಟಪಕ್ಕೆ ಬಂದು ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವ ನೆರವೇರಿಸಲಾಯಿತು. ಶೈವಾಗಮಿಕ ಡಾ.ಎಸ್.ಎನ್.ಸೋಮಸುಂದರ ದೀಕ್ಷಿತ್ ಪೂಜಾಕೈಕಂರ್ಯಗಳನ್ನು ನೆರವೇರಿಸಿದರು.

ಅರ್ಚಕರಾದ ಸೊಮಸುಂದರ್ ಮತ್ತು ಎಸ್.ಕೆ.ಶ್ಯಾಮ್‌ಪ್ರಸಾದ್ ದೀಕ್ಷಿತ್, ನವೀನ್‌ಕುಮಾರ್ ದೀಕ್ಷಿತ್, ಗುರು, ಜಯರಾಮ್ ದೀಕ್ಷಿತ್ ಮತ್ತು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಸಂಸದ ಡಾ.ಕೆ.ಸುಧಾಕರ್, ಶಾಸಕ ಎಸ್.ಶ್ರೀನಿವಾಸ್, ತಹಸೀಲ್ದಾರ್ ಅಮೃತ್ ಅರ್ತೇಶ್, ಶಿವಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ.ಪ್ರಭುದೇವ, ಸದಸ್ಯರಾದ ದಿನೇಶ ನಾಯಕ, ಮನುಪ್ರಸಾದ್, ಗಂಗಾಧರ್, ಚೇತನ ನಾಗೇಶ ನಾಯ್ಕ, ಸಂತೋಷ್, ಕಾರ್ಯನಿರ್ವಣಾಧಿಕಾರಿ ಬೃಂದಾ, ಪಾರು ಪತ್ತೆದಾರ್ ಸುಮಾ, ಮುಖಂಡರಾದ ಸಪ್ತಗಿರಿ ಶಂಕರ್ ನಾಯಕ, ಎಪಿಎಂಸಿ ಸದಸ್ಯ ಗಂಗಣ್ಣ , ಬರಗೇನಹಳ್ಳಿ ಸೊಸೈಟಿ ಅಧ್ಯಕ್ಷ ಬಿ.ಆರ್.ಪುಟ್ಟಗಂಗಯ್ಯ, ಉಪ ತಹಸೀಲ್‌ದ್ದಾರ್ ಬಿ.ಸಿ.ಶಶಿಧರ್, ರಾಜಸ್ವ ಸುಂದರ್ ರಾಜ್, ಗ್ರಾಮ ಲೆಕ್ಕಿಗ ಎ.ಬಾಲಕೃಷ್ಣ, ಬಮುಲ್ ಬಾಬು, ಜಿಪಂ ಮಾಜಿ ಸದಸ್ಯ ಚಲುವರಾಜು, ಮುಖಂಡರಾದ ಭವಾನಿಶಂಕರ್ ಭೈರೇಗೌಡ, ರೇಣುಕೇಶ್ವರ್ ಇದ್ದರು.