ಮಜ್ಜಿಗೆಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಗಿರಿಜಾ ಕುಮಾರ್ ಮತ್ತು ಉಪಾಧ್ಯಕ್ಷೆರಾಗಿ ಮಹದೇವಮ್ಮ ಗೌಡಯ್ಯ ಅವಿರೋಧವಾಗಿ ಆಯ್ಕೆಯಾದರು. 
ಜಿಲ್ಲೆ

ಅಧ್ಯಕ್ಷರಾಗಿ ಗಿರಿಜಾ ಕುಮಾರ್ ಆಯ್ಕೆ

ನಾಗೇಶ ಎಸ್

ಕೆ.ಆರ್.ಸಾಗರ: ಮಜ್ಜಿಗೆಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಗಿರಿಜಾ ಕುಮಾರ್, ಉಪಾಧ್ಯಕ್ಷರಾಗಿ ಮಹದೇವಮ್ಮ ಗೌಡಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 10 ಸದಸ್ಯರು ಇರುವ ಸಂಘಕ್ಕೆ ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಗಿರಿಜಾ ಕುಮಾರ ಹಾಗೂ ಮಹದೇವಮ್ಮ ಗೌಡಯ್ಯ ಮಾತ್ರ ನಾಪಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಆನಂದ ನಾಯ್ಕ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ನಿರ್ದೇಶಕರಾದ ಹೇಮಾವತಿ, ಶೋಭಾ, ಪ್ರೇಮಾ, ರೇಖಾ, ಗಾಯತ್ರಿ, ರಾಜೇಶ್ವರಿ, ಲಕ್ಷ್ಮಮ್ಮ, ಶೀಲಾ, ಕಾರ್ಯದರ್ಶಿ ಭಾಗ್ಯಾ ಇದ್ದರು.