ಕೆ.ಆರ್.ನಗರ : ಗುಣಮಟ್ಟದ ಗೃಹಬಳಕೆ ವಸ್ತುಗಳಿಗೆ ಹೆಸರುವಾಸಿಯಾಗಿರುವ ಗಿರಿಯಾಸ್‌ನ 159ನೇ ಮೆಗಾ ಸ್ಟೋರ್ ಶುಕ್ರವಾರ ಪಟ್ಟಣದಲ್ಲಿ ಉದ್ಘಾಟನೆಯಾಯಿತು.
ಪಟ್ಟಣದ ಮೈಸೂರು-ಹಾಸನ ರಸ್ತೆಯ ಎಸ್‌ಬಿಐ ಬ್ಯಾಂಕ್ ಎದುರು ಮಳಿಗೆ ಉದ್ಘಾಟನೆಗೊಂಡಿತು. ಗಿರಿಯಾಸ್‌ನ ಮುಖ್ಯಸ್ಥ ಅಮಾನ್ ಗಿರಿಯಾಸ್ ಹಾಗೂ ಪಟ್ಟಣದ ಉದ್ಯಮಿ ಪಂಚಾಕ್ಷರಿ ಟೇಪ್ ಕತ್ತರಿಸುವ ಮೂಲಕ ನೂತನ ಮಳಿಗೆಯನ್ನು ಲೋಕಾರ್ಪಣೆ ಮಾಡಿದರು.
ವಿವಿಧ ಕಂಪನಿಗಳ ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಕಿಚನ್ ಅಫ್ಲೈಯನ್ಸ್‌ಗಳು ಕಡಿಮೆ ಧರದಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಅನೂಕುಲವಾಗುವ ರೀತಿಯಲ್ಲಿಎಲ್ಲ ರೀತಿಯ ವಸ್ತುಗಳು ಒಂದೇ ಸೂರಿನಡಿ ದೊರಕಲಿದೆ.
ಮಳಿಗೆ ಉದ್ಘಾಟನೆ ಸುದ್ದಿಯನ್ನು ಮೊದಲೇ ತಿಳಿದಿದ್ದರಿಂದ ಸಾವಿರಾರು ಗ್ರಾಹಕರು ಮೊದಲ ದಿನವೇ ಮಳಿಗೆಗೆ ಭೇಟಿ ನೀಡಿ ಟಿವಿ, ಫ್ರಿಡ್ಜ್, ವಾಷಿಂಗ್ ಮಿಷನ್, ಎಲೆಕ್ಟ್ರಿಕ್ ಸ್ಟೌಗಳು, ಲ್ಯಾಪ್‌ಟಾಪ್, ಮೊಬೈಲ್‌ಗಳನ್ನು ಖರೀದಿ ಮಾಡಿರು. ಮೊದಲ ದಿನವಾದ್ದರಿಂದ ವಿಶೇಷ ಡಿಸ್ಕೌಂಟ್ ಜತೆಗೆ 20 ಪರ್ಸೆಂಟ್ ಡಿಸ್ಕೌಂಟ್ ಕೂಡ ನೀಡಲಾಯಿತು. ಉದ್ಘಾಟನಾ ದಿನದಂದು ಬರುವಂತೆ ಆಹ್ವಾನದ ಕಾರ್ಡ್ ವಿತರಿಸಿದ್ದರಿಂದ ಕಾರ್ಡ್ ಜತೆ ಬಂದ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಉಚಿತವಾಗಿ ಎರಡು ಕುಡಿಯುವ ನೀರಿನ ಬಾಟಲ್‌ಗಳನ್ನು ಉಡುಗೊರೆಯಾಗಿ ಪಡೆದರು.
ಗಿರಿಯಾಸ್ ಮಳಿಗೆ ಪ್ರಾರಂಭವಾದ ಮೊದಲ ದಿನವೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಉತ್ತಮ ವ್ಯವಹಾರ ಮಾಡುವ ಜತೆಗೆ ತಾಲೂಕಿನ ಜನತೆಗೆ ಗುಣಮಟ್ಟದ ವಸ್ತುಗಳು ದೊರೆಯವ ಅವಕಾಶವನ್ನು ಗಿರಾಯಾಸ್ ಒದಗಿಸಲಿದೆ. ನಮ್ಮಲ್ಲಿ ಗುಣಮಟ್ಟದ ಎಲೆಕ್ಟ್ರಾನಿಕ್, ಮೊಬೈಲ್ಸ್‌ಗಳು, ಲ್ಯಾಪ್‌ಟಾಪ್‌ಗಳು, ಕಿಚನ್ ಅಫ್ಲೈಯನ್ಸ್‌ಗಳು ಕಡಿಮೆ ದರದಲ್ಲಿ ಲಭ್ಯವಿದ್ದು ಗ್ರಾಹಕರು ಭೇಟಿ ನೀಡಿ ಪ್ರಯೋಜನ ಪಡೆಯಬಹುದಾಗಿದೆ.
ಸಂತೋಷ್‌ಕುಮಾರ್ ವ್ಯವಸ್ಥಾಪಕ, ಗಿರಿಯಾಸ್ ಕೆ.ಆರ್.ನಗರ ಶಾಖೆ