ಜಿಲ್ಲೆ

ಗಿರಿ ಫ್ರೆಂಡ್ಸ್ ಕಾರ್ಯ ಶ್ಲಾಘನಾರ್ಹ

ಇಂದಿರಾ ಎನ್ ಕೆ

ಕೋಟ: ಕೆರೆ ದೀಪೋತ್ಸವದಂಥ ಧಾರ್ಮಿಕ ಕಾರ್ಯಕ್ರಮ ಮೂಲಕ ಯುವ ಪೀಳಿಗೆಯಲ್ಲಿ ಧಾರ್ಮಿಕ ಭಾವನೆ ಬೆಳೆಸುತ್ತಿರುವ ಸಂಸ್ಥೆ ಗಿರಿಫ್ರೆಂಡ್ಸ್ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೆ.ತಾರಾನಾಥ ಹೊಳ್ಳ ಹೇಳಿದರು.

ಇತ್ತೀಚೆಗೆ ಚಿತ್ರಪಾಡಿಯ ಗಿರಿ ಫ್ರೆಂಡ್ಸ್ ಸಂಸ್ಥೆ ಆಯೋಜಿಸಿದ ಚಿತ್ರಪಾಡಿಯ ಕೆರೆ ದೀಪೋತ್ಸವ ಸಂದರ್ಭ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಚಿತ್ರಪಾಡಿ ಶ್ರೀನಿವಾಸ್ ಸೋಮಾಯಾಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗಿರಿಫ್ರೆಂಡ್ಸ್ ಅಧ್ಯಕ್ಷ ವಿಶ್ವನಾಥ್ ನಾವಡ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ಸತ್ಯನಾರಾಯಣ ನಾರಿ, ಗೌರವಾಧ್ಯಕ್ಷ ಮಂಜುನಾಥ್ ಆಚಾರ್, ಸಂಚಾಲಕ ರವಿ ಪೂಜಾರಿ, ಲೆಕ್ಕಪರಿಶೋಧಕ ಮಾಧವ ಪೈ, ಕಾರ್ಯದರ್ಶಿ ಹರೀಶ ಆಚಾರ್, ಕೋಶಾಧಿಕಾರಿ ನಾಗೇಂದ್ರ ಆಚಾರ್ ಉಪಸ್ಥಿತರಿದ್ದರು. ಬಳಿಕ ವಿ.ಕೆ ಅಸೋಸಿಯೇಟ್ಸ್‌ನ ಮಾಲೀಕ ರಾಮಚಂದ್ರ ಆಚಾರ್ ಸಾರಥ್ಯದಲ್ಲಿ ಸಂಗೀತ ರಸಮಂಜರಿ ನಡೆಯಿತು. ಸೃಷ್ಟಿ ನಾವಡ ಮತ್ತು ಸಾಹಿತ್ಯ ನಾವಡ ಪ್ರಾರ್ಥಿಸಿದರು. ಆದಿತ್ಯ ಐತಾಳ್ ನಿರೂಪಿಸಿದರು. ಸಂಸ್ಥೆಯ ಸದಸ್ಯರು ಸಹಕರಿಸಿದರು.