ಹುಬ್ಬಳ್ಳಿ : ಉಪರಾಷ್ಟ್ರಪತಿ ಜಗದೀಪ ಧನಕರ್ ಹಾಗೂ ಅವರ ಪತ್ನಿ ಸುಧೇಶ ಧನಕರ್ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು ಶುಕ್ರವಾರದಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹುಬ್ಬಳ್ಳಿಯ ನಿವಾಸಕ್ಕೆ ಭೇಟಿ ನೀಡಿದರು.
ಉಪರಾಷ್ಟ್ರತಿ ದಂಪತಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಜೋಶಿ ದಂಪತಿ ಆರತಿ ಬೆಳಗಿ, ಏಲಕ್ಕಿ ಹಾರ ಹಾಕಿ ಶಾಲು ಹೊದಿಸಿ, ಬರಮಾಡಿಕೊಂಡರು.
ಈ ಭಾಗದ ಪ್ರಸಿದ್ಧ ಪೇಡಾ, ಕರದಂಟು, ಕುಂದಾಗಳೊಂದಿಗೆ ಉತ್ತರ ಕರ್ನಾಟಕದ ಅತ್ಯಂತ ಪ್ರಸಿದ್ಧವಾದ ಮಂಡಕ್ಕಿ ಮಿರ್ಚಿ, ಗಿರಮಿಟ್, ತುಪ್ಪದ ಅವಲಕ್ಕಿ, ಉಪ್ಪಿಟ್ಟು, ಶಿರಾ, ವಿವಿಧ ಬಗೆಯ ಹಣ್ಣಿನ ರಸಗಳನ್ನು ಉಪರಾಷ್ಟ್ರಪತಿ ಜಗದೀಪ ಧನಕರ್ ದಂಪತಿ ಹಾಗೂ ರಾಜ್ಯಪಾಲ ಗೆಲ್ಹೋಟ್ ಸವಿದರು. ವಿಶೇಷವಾಗಿ ಈ ಭಾಗದ ಮಿರ್ಚಿ ಸವಿದ ಉಪರಾಷ್ಟ್ರಪತಿ ಧನಕರ್ ಅವರು, ಒಂದಿಷ್ಟು ಮಿರ್ಚಿಗಳನ್ನು ಪ್ಯಾಕ್ ಮಾಡಿಸಿಕೊಂಡು ದೆಹಲಿಗೂ ಕೋಡೊಯ್ದದ್ದು ವಿಶೇಷವಾಗಿತ್ತು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ. ಆರ್. ಪಾಟೀಲ, ಮಾಜಿ ಶಾಸಕ ಅಶೋಕ ಕಾಟವೆ, ಎಂ. ನಾಗರಾಜ, ಗೋವಿಂದ ಜೋಶಿ, ಎಚ್. ಎನ್. ನಂದಕುಮಾರ್, ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಶಿವು ಹಿರೇಮಠ, ರಾಜಣ್ಣ ಕೊರವಿ, ಉಮೇಶ ಕೌಜಗೇರಿ, ರಾಮಣ್ಣ ಬಡಿಗೇರ, ಪ್ರಮುಖರಾದ ರಂಗಾ ಬದ್ದಿ, ಸತಿಶ ಶೇಜವಾಡಕರ, ಡಾ. ಕ್ರಾಂತಿಕಿರಣ, ಜಯತೀರ್ಥ ಕಟ್ಟಿ, ರೂಪಾ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.