ಗದಗ ನಗರದ ಕಬ್ಬಿಗರ ಕೂಟದಲ್ಲಿ ಜರುಗಿದ ಗಿರಡ್ಡಿ ಗೋವಿಂದರಾಜರ 84ನೇ ಜಯಂತಿ ಕಾರ್ಯಕ್ರಮದಲ್ಲಿ ಡಿ.ವಿ. ಬಡಿಗೇರ ಮಾತನಾಡಿದರು. ಎಸ್​. ಹಿಂಡಿ, ಎಸ್​.ಎಸ್​. ಮಲ್ಲಾಪೂರ, ಮಲ್ಲಿಕಾರ್ಜುನ ಪೂಜಾರ, ಚನ್ನವಿರ ನಾಲ್ವಾಡ ಹಲವರು ಇದ್ದರು. 
ಜಿಲ್ಲೆ

ವಿಮರ್ಶೆಯ ಮೌಲ್ಯ ಹೆಚ್ಚಿಸಿದ ಸಾಹಿತಿ ಗಿರಡ್ಡಿ ಗೋವಿಂದರಾಜ: ಡಿ.ವಿ. ಬಡಿಗೇರ

Gadag - Shivanand Hiremath

ಗದಗ:
ವಿಮರ್ಶೆ ಎಂದರೆ ಕೇವಲ ಕೃತಿಯ ಪರಿಚಯವಲ್ಲ. ಒಂದು ಕೃತಿಯ ವಸ್ತುನಿಷ್ಠ ಮೌಲ್ಯಮಾಪನ. ಇಂಥ ವಸ್ತುನಿಷ್ಠ ವಿಮರ್ಶೆಗೆ ಹೆಸರಾಗಿದ್ದ ಡಾ. ಗಿರಡ್ಡಿ ಗೋವಿಂದರಾಜ ಅವರು ಕನ್ನಡದ ಅಪರೂಪದ ವಿಮರ್ಶಕರಾಗಿದ್ದರು ಎಂದು ಸಾಹಿತಿ, ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ. ಬಡಿಗೇರ ಹೇಳಿದರು.
ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಕಬ್ಬಿಗರ ಕೂಟ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್​ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಗಿರಡ್ಡಿ ಗೋವಿಂದರಾಜರ 84ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಹಮ್ಮು ಬಿಮ್ಮಿಲ್ಲದೇ ಸರಳ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದ ಡಾ. ಗಿರಡ್ಡಿಯವರು ವಿಶ್ವವಿದ್ಯಾಲಯದಲ್ಲಿ ಆಂಗ್ಲ ಭೋದಕರಾಗಿದ್ದರು. ಶ್ರೇಷ್ಠ ಶ್ರೇಣಿಯ ವಿಮರ್ಶಕರೆಂದು ಹೆಸರಾಗಿದ್ದರು. ಸಣ್ಣ ಕಥೆಗಳ ರಚನೆಯಲ್ಲದೇ ಮಣ್ಣು ಮುಂತಾದ ನೀಳ್ಗತೆಗಳ ಮೂಲಕ ಕನ್ನಡ ಸಂಸತಿಕ ಲೋಕವನ್ನು ಶ್ರೀಮಂತಗೊಳಿಸಿದ ಗಿರಡ್ಡಿಯವರು ವಿಮರ್ಶೆಯ ಬಗ್ಗೆ ಅನನ್ಯ ಕೃತಿಗಳನ್ನು ನೀಡಿದ್ದಾರೆ. ಸಾಹಿತ್ಯ ಅಕಾಡೆಮಿಯ ಅಧ್ಯರಾಗಿ ಅಕಾಡೆಮಿಯ ಕಾರ್ಯೇತ್ರವನ್ನು ವಿಸ್ತರಿಸಿದ್ದಲ್ಲದೇ ಆ ಮೂಲಕ ವಿಭಿನ್ನ ಕೃತಿಗಳನ್ನು ಪ್ರಕಟಿಸಿ ತಮ್ಮ ವ್ಯಕ್ತಿತ್ವದ ಛಾಪು ಮೂಡಿಸಿದರು. ಕನ್ನಡ ವಿಮರ್ಶಾ ಲೋಕದ ಅಜಾತ ಶತ್ರುವಾಗಿ ಬಾಳಿದ ಗಿರಡ್ಡಿ ಗೋವಿಂದರಾಜ ಯಾವಾಗಲೂ ವ್ಯಕ್ತಿನಿಷ್ಠ ವಿಮರ್ಶೆಗೆ ಒಗ್ಗಿಕೊಳ್ಳದೇ ವಸ್ತು ನಿಷ್ಠ ವಿಮರ್ಶೆಯ ಮೂಲಕ ಜನಮನದಲ್ಲಿ ಬೇರೂರಿದ್ದರು ಎಂದರು.
ಅಧ್ಯತೆ ವಹಿಸಿದ್ದ ಕಬ್ಬಿಗರ ಕೂಟದ ಅಧ್ಯ ನ್ಯಾಯವಾದಿ ಮನೋಹರ ಮೇರವಾಡೆ ಮಾತನಾಡಿ, ಗದಗ ಜಿಲ್ಲೆಯವರಾದ ಗಿರಡ್ಡಿಯವರು ಅತ್ಯಂತ ಸರಳ ಜೀವಿಯಾಗಿದ್ದರು. ಅವರು ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯರಾಗಿದ್ದಾಗ ಗದಗದಲ್ಲಿ ಕಬ್ಬಿಗರ ಕೂಟ ಹಾಗೂ ಜಿಲ್ಲಾ ಕ.ಸಾ.ಪ. ಸಹಯೋಗದಲ್ಲಿ ನಡೆಸಿದ ಕಾವ್ಯ ಸಹೃದಯತಾ ಶಿಬಿರ ಕಾರ್ಯಕ್ರಮಕ್ಕೆ ಶ್ರಮಿಸಿದ್ದರು ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್​ ಉಪಾಧ್ಯ ಬಿ.ಎಸ್​. ಹಿಂಡಿ, ನಿವೃತ್ತ ಶಿಕ ಎಸ್​.ಎಸ್​. ಮಲ್ಲಾಪೂರ, ಹಾತಲಗೇರಿಯ ಕವಿ ಮಲ್ಲಿಕಾರ್ಜುನ ಪೂಜಾರ, ಚನ್ನವಿರ ನಾಲ್ವಾಡ, ನಜೀರ ಸಂಶಿ, ಬಿ.ಎಸ್​. ಹಿಂಡಿ, ಎಸ್​.ಎಸ್​. ಮಲ್ಲಾಪೂರ ಹಲವರು ಇದ್ದರು.