oplus_2098176 
ಜಿಲ್ಲೆ

ವಂಚಕರ ವಿರುದ್ಧ ಜಾಗ್ರತರಾಗಲು ಸಲಹೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಶುಂಠಿಗೆ ಕಾಣಿಸಿಕೊಂಡಿರುವ ಬೆಂಕಿ ರೋಗದ ನಿಯಂತ್ರಣಕ್ಕೆ ಔಷಧಿ ಕೊಡುವ ನೆಪದಲ್ಲಿ ಕೆಲ ಕೀಟನಾಶಕ ತಯಾರಿಕ ಸಂಸ್ಥೆಗಳು ಬೆಳೆಗಾರರನ್ನು ವಂಚಿಸುತ್ತಿದ್ದು, ಇದರ ವಿರುದ್ಧ ಎಚ್ಚರಿಕೆಯಿಂದ ಇರುವಂತೆ ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರ ರೈತರಲ್ಲಿ ಮನವಿ ಮಾಡಿದೆ.

ಶುಂಠಿ ಬೆಳೆಗೆ ಕಳೆದ ವರ್ಷ ಕಟಾವಿನ ಸಮಯದಲ್ಲಿ ಕಾಣಿಸಿಕೊಂಡಿದ್ದ ಪೈರಿಕ್ಯುಲೇರಿಯಾs ಎಂಬ ಶಿಲೀಂದ್ರದಿAದ ಹರಡುವ ಬೆಂಕಿ ರೋಗ ಈ ವರ್ಷ ಶುಂಠಿ ನಾಟಿ ಮಾಡಿದ 70 ರಿಂದ 90 ದಿನಗಳಾಗಿರುವ ಈ ಸಮಯದಲ್ಲಿಯೇ ಕಾಣಿಸಿಕೊಂಡಿದೆ. ಕುಶಾಲನಗರ, ಸೋಮವಾರಪೇಟೆ ಪಕ್ಕದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮತ್ತು ಹುಣಸೂರು ತಾಲೂಕುಗಳಲ್ಲಿ ರೋಗ ಬಾಧೆ ತೀವ್ರವಾಗಿದೆ. ಈ ಸಂದರ್ಭದಲ್ಲಿ ಶುಂಠಿಯ ಈ ಬೆಂಕಿ ರೋಗದ ಬಗ್ಗೆ ಸಂಶೋಧನೆ ಮಾಡಿರುವ ಕಲ್ಲಿಕೋಟೆಯ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನ ಸಂಸ್ಥೆ ತಜ್ಞರು ಶುಂಠಿಗೆ ಬಂದಿರುವ ಈ ರೋಗವು ಪೈರಿಕ್ಯುಲೇರಿಯಾs ಎಂಬ ಶಿಲೀಂದ್ರದಿAದ ಹರಡುತ್ತದೆ ಎನ್ನುವುದನ್ನು ಕಂಡುಕೊAಡಿದ್ದಾರೆ. ಇದರ ಹತೋಟಿಗೆ ಎರಡು ಶಿಲೀಂದ್ರ‍್ರನಾಶಕಗಳನ್ನು ಶಿಫಾರಸ್ಸು ಕೂಡ ಮಾಡಿದ್ದಾರೆ. ಅದರ ಪ್ರಕಾರ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರz ಮೂಲಕ ಈಗಾಗಲೇ ರೈತರಿಗೆ ಈ ರೋಗ ಗುರುತಿಸುವ ಬಗ್ಗೆ ಮತ್ತು ಅದರ ರೋಗದ ಹತೋಟಿ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.

ಆದರೆ ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಹಲವು ಕೀಟನಾಶಗಳನ್ನು ಮಾರಾಟ ಮಾಡುವ ಕಂಪನಿಗಳು ತಮ್ಮ ತಮ್ಮ ಕಂಪನಿಗಳಿAದ ಬಿಡುಗಡೆ ಮಾಡಿರುವ ಹಲವಾರು ಶಿಲೀಂದ್ರನಾಶಕಗಳನ್ನು ಶುಂಠಿಗೆ ಬಂದಿರುವ ಈ ಬೆಂಕಿ ರೋಗದ ಹತೋಟಿಗೆ ಶಿಫಾರಸ್ಸು ಮಾಡುತ್ತಿರುವುದು ಕಂಡುಬರುತ್ತಿದೆ. ಇಂಥ ಕಂಪನಿಯವರು ಬೇರೆ ಬೇರೆ ಈ ಶಿಲೀಂದ್ರನಾಶಕÀಗಳನ್ನು ಕೊಡುವುದರ ಜತೆಗೆ ಕೆಲವು ಟಾನಿಕ್, ಬೂಸ್ಟರ್‌ಗಳಲ್ಲೂ ಸೇರಿಸಿ ಸಿಂಪಡಿಸಿ ಎಂದು ಬೆಳೆಗಾರರಿಗೆ ಕೊಡುತ್ತಿದ್ದಾರೆ. ಇದರಿಂದಾಗಿ ಈಗಾಗಲೇ ಎಕರೆಗೆ 3.5 ರಿಂದ 4 ಲಕ್ಷ ರೂ. ಖರ್ಚು ಮಾಡಿರುವ ಶುಂಠಿ ಬೆಳೆಗಾರರು ಯಾವ ಹತೋಟಿ ಕ್ರಮಗಳನ್ನು ಅನುಸರಿಸಬೇಕೆಂದು ಗೊಂದಲದಿAದ ಇದ್ದಾರೆ.

ಈ ಅವಕಾಶಗಳನ್ನು ಉಪಯೋಗಿಸಿಕೊಂಡು ಹಲವಾರು ಕಂಪನಿಗಳು ತಮ್ಮ ತಮ್ಮ ಕಂಪನಿಯಿAದ ಬಿಡುಗಡೆ ಮಾಡಿರುವ ಶಿಲೀಂದ್ರನಾಶಗಳನ್ನು ಬಳಸುವಂತೆ ಬೆಳೆಗಾರರಿಗೆ ಒತ್ತಾಯ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ಮೂಲಗಳ ಮೂಲಕ ಬೆಳೆಗಾರರನ್ನು ವಂಚಿಸುವ ಪ್ರಯತ್ನ ನಡೆಸಿದ್ದಾರೆ. ಹಾಗಾಗಿ ರೈತರು ಕ್ಯಾಲಿಕಟ್‌ನ ಭಾರತೀಯ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆ ಶಿಫಾರಸ್ಸು ಮಾಡಿರುವ ಶಿಲೀಂದ್ರನಾಶಗಳನ್ನು ಮಾತ್ರ ಖರೀದಿಸಿ ಸಿಂಪಡಣೆಗೆ ಉಪಯೋಗಿಸಬೇಕೆಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ತಜ್ಞರು ರೈತರಲ್ಲಿ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ತಜ್ಞರನ್ನು ಸಂಪರ್ಕಿಸಬಹುದಾಗಿದೆ ಎಂದೂ ತಿಳಿಸಿದ್ದಾರೆ.