ಕೆ.ಆರ್.ಸಾಗರದ ಹಿರಿಯ ಪ್ರಾಥಮಿಕ ಶಾಲೆಗೆ ಪ್ರೊಜೆಕ್ಟರ್, ಸ್ಕ್ರೀನ್, ಲ್ಯಾಪ್‌ಟಾಪ್ ಹಾಗೂ ಯುಪಿಎಸ್‌ಅನ್ನು ಎಂ.ಜಿ.ಎನ್ ಪ್ರಸಾದ್ ಕೊಡುಗೆ ನೀಡಿದರು. ಮಹೇಶ್, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. 
ಜಿಲ್ಲೆ

ಓದಿದ ಶಾಲೆಗೆ ಪ್ರೊಜೆಕ್ಟರ್ ಕೊಡುಗೆ

ನಾಗೇಶ ಎಸ್

ಕೆ.ಆರ್.ಸಾಗರ: ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆ (ಎಸ್.ಕ್ಯು)ಯಲ್ಲಿ ಶಿಕ್ಷಣ ಪಡೆದು, ಅದೇ ಶಾಲೆಯಲ್ಲಿ ಹಲವು ವರ್ಷ ಶಿಕ್ಷಕರಾಗಿ ಕೆಲಸ ನಿರ್ವಹಿಸಿದ ನೆನಪಿಗಾಗಿ ಎಂ.ಜಿ.ಎನ್. ಪ್ರಸಾದ್ ಅವರು ಪ್ರೊಜೆಕ್ಟರ್, ಸ್ಕ್ರೀನ್, ಲ್ಯಾಪ್‌ಟಾಪ್ ಹಾಗೂ ಯುಪಿಎಸ್‌ಅನ್ನು ಶನಿವಾರ ಕೊಡುಗೆಯಾಗಿ ನೀಡಿದರು.

ಹೊಸಉಂಡವಾಡಿ ಗ್ರಾಮದಲ್ಲಿ ವಾಸವಾಗಿರುವ ಎಂ.ಜಿ.ಎನ್.ಪ್ರಸಾದ್ ಕೊಪ್ಪಳ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅಧೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಓದಿ ಮತ್ತು ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಾಲೆಯ ಮಕ್ಕಳ ಶಿಕ್ಷಣದ ಅನುಕೂಲಕ್ಕೆ ಕೊಡುಗೆ ನೀಡಿದ್ದಾರೆ. ಮುಂದೆಯೂ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಬೇಕಾದ ವಸ್ತುಗಳನ್ನು ನೀಡುತ್ತೇನೆ, ಹಿಂದೆ ನನಗೆ ಪಾಠ ಕಲಿಸಿದ ಗುರುಗಳ ಪ್ರೋತ್ಸಾಹ, ನಾನು ಈ ಹುದ್ದೆಗೆ ಬರಲು ಕಾಣವಾಗಿದೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮಹೇಶ್, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.