ಜಿಲ್ಲೆ

ಜೈಂಟ್ಸ್ ಗ್ರುಪ್ ಆಫ್ ಹುಬ್ಬಳ್ಳಿ ಪರಿವಾರದ ಪದಗ್ರಹಣ

ಹುಬ್ಬಳ್ಳಿ : ಜೈಂಟ್ಸ್ ಗ್ರುಪ್ ಆಫ್ ಹುಬ್ಬಳ್ಳಿ ಪರಿವಾರದ ಪದಗ್ರಹಣ ಸಮಾರಂಭ ನಗರದ ಮೂರುಸಾವಿರ ಮಠದ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ನಿರ್ದೇಶಕ ಮಂಡಳಿ ಅಧ್ಯಕ್ಷ ದಿವಾನಸಾಬ್ ನದಾಫ, ಜೈಂಟ್ಸ್ ಪರಿವಾರ ಮಾಡುತ್ತ ಬಂದಿರುವ ಸಾಮಾಜಿಕ ಕಾರ್ಯಗಳನ್ನು ತಮ್ಮ ಅವಧಿಯಲ್ಲಿಯೂ ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.

ಅತಿಥಿಯಾಗಿದ್ದ ಸಮಾಜ ಸೇವಕ ಗುರು ಹೀರೂರು ಮಾತನಾಡಿ, ಜೈಂಟ್ಸ್ ಪರಿವಾರದ ಸಾಮಾಜಿಕ ಕಾರ್ಯಗಳು ಮಾದರಿಯಾಗಿವೆ ಎಂದರು.

ವಿಶೇಷ ಸದಸ್ಯೆ ಮತ್ತು ಮಾರ್ಗದರ್ಶಕಿ ಜ್ಯೋತಿ ವೆಂಕಟೇಶ ಮಾತನಾಡಿದರು. ಮುರುಳಿಧರ ಬಾಬಜಿ, ತಾರಾದೇವಿ ವಾಲಿ, ಎನ್. ಬಿ. ಹೊಸೂರ, ರತ್ನಾ ಗಂಗಣ್ಣವರ, ರೇಖಾ ರಿತ್ತಿ, ಚನ್ನಬಸಪ್ಪ ಧಾರವಾಡಶೆಟ್ಟರ, ದಾವಲ್​ಸಾಬ ನದಾಫ, ಜೈಂಟ್ಸ್ ಪರಿವಾರದ ಪ್ರಮುಖರು, ಸದಸ್ಯರು ಹಾಗೂ ಇತರರು ಇದ್ದರು.