ಮೈಲಾಪುರ ಗ್ರಾಮದ ಕಾವೇರಿ ಎಂಬುವರ ಮನೆಯಲ್ಲಿ ಸೆರೆ ಹಿಡಿಯಲಾದ ಬೃಹತ್ ಗಾತ್ರದ ನಾಗರಹಾವು.  
ಜಿಲ್ಲೆ

ಬೃಹತ್ ಗಾತ್ರದ ನಾಗರಹಾವು ರಕ್ಷಣೆ

ಅಭಿನಯ್ ಎಚ್.ಎಂ

ಸಿದ್ದಾಪುರ: ಮೈಲಾಪುರ ಗ್ರಾಮದ ಕಾವೇರಿ ಎಂಬುವರ ಮನೆಯಲ್ಲಿ ಬೃಹತ್ ಗಾತ್ರದ ನಾಗರಹಾವನ್ನು ಉರಗ ರಕ್ಷಕ ಸುರೇಶ್ ಪೂಜಾರಿ ಭಾನುವಾರ ರಕ್ಷಿಸಿದ್ದಾರೆ.

ಕೋಳಿಗಳನ್ನು ಗೂಡಿನೊಳಗೆ ಸೇರಿಸುವ ಸಮಯದಲ್ಲಿ ಕೋಳಿಯೊಂದು ಮೃತಪಟ್ಟಿತ್ತು. ಆ ಬಳಿಕ ಗೂಡನ್ನು ಪರಿಶೀಲಿಸಿದಾಗ ಹಾವು ಇರುವುದು ಕಂಡು ಬಂತು. ತಕ್ಷಣವೇ ಕಾವೇರಿ ಅವರು ಉರಗ ರಕ್ಷಕ ಸುರೇಶ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.

ಸ್ಥಳಕ್ಕಾಗಮಿಸಿದ ಸುರೇಶ್, ಆರು ಅಡಿ ಉದ್ದದ ನಾಗರಹಾವನ್ನು ರಕ್ಷಿಸಿ ಮಾಲ್ತಾರೆ ಅರಣ್ಯಕ್ಕೆ ಬಿಟ್ಟರು. ಹಾವು ಗೂಡಿಗೊಳಗೆ ಇದ್ದ ಸಂದರ್ಭ ಒಂದು ಕೋಳಿ, ನಾಲ್ಕು ಮೊಟ್ಟೆಯನ್ನು ನುಂಗಿತ್ತು.