MAREPPA HARAVI 
ಜಿಲ್ಲೆ

ಜೂ.23 ರಂದು ಸಿಎಂಗೆ ಘೇರಾವ್

Raichur - Reporter - Rachhai Swamy

 ರಾಯಚೂರು ಭೂಮಿ ಮತ್ತು ವಸತಿ ರಹಿತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿ ಸಾಗುವಳಿ ಚೀಟಿ, ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಜೂ.23 ರಂದು ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿಗಳನ್ನು ಘೇರಾವ್ ಹಾಕಿ ಮನವಿ ಸಲ್ಲಿಸಲಾಗುತ್ತದೆಂದು ಭೂಮಿ ಮತ್ತು ವಸತಿ ರಹಿತರ ಹೋರಾಟ ಸಮಿತಿ ಸಂಚಾಲಕ ಮಾರೇಪ್ಪ ಹರವಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಗರಹುಕುಂ ಸಾಗುವಳಿದಾರರಿಗೆ ಚೀಟಿ ನಿಡುವದಾಗಿ ಸರ್ಕಾರ ಭರವಸೆ ನೀಡಿರುವದು ಸ್ವಾಗತಾರ್ಹ. ಆದರೆ ಕೆಳ ಹಂತದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೇ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ಹತ್ತಾರು ವರ್ಷ ಹೋರಾಟಕ್ಕೆ ಇಲ್ಲಿಯವರಗೆ ಕೇವಲ ಭರವಸೆ ಮಾತ್ರ ದೊರಕಿದೆ. ಕೂಡಲೇ ಸಾಗುವಳಿದಾರರಿಗೆ ಪಟ್ಟ ನೀಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಗುತ್ತದೆ.

ಈಗಾಗಲೇ ಫಾರಂ 53, 57 ಸೇರಿದಂತೆ ಅರ್ಜಿ ಸಲ್ಲಿಸಿರುವ ರೈತರಿಗೆ ಇನ್ನಷ್ಟು ದಿನ ಕಾಲಹರಣ ಮಾಡದೇ ಕೂಡಲೇ ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿ ದೇವನಹಳ್ಳಿ ಚಲೋ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆಯಿಂದಲು ದೇವನಹಳ್ಳಿ ಹೋರಾಟ ಬೆಂಬಲಿಸ ಭಾಗವಹಿಸಲಾಗುತ್ತದೆ ಎಂದರು.

ಈ ಸಂದರ್ಬದಲ್ಲಿ ಆಂಜಿನೇಯ್ಯಕುರುಬದೊಡ್ಡಿ, ಶ್ರೀನಿವಾಸ ಕೊಪ್ಪರ, ಮಾರೆಮ್ಮ ಭೀಮಣ್ಣ ನಗನೂರು, ಗಂಗಪ್ಪ ತೋರಣದಿನ್ನಿ,ಚಾಂದಪಾಷಾ ಬೆಳಿಗನೂರು, ಶಂಶಾಲಂ ಪೋತಗಲ್, ವಿರೇಶ ನಾಯಕ, ರಂಗಾರೆಡ್ಡಿ, ಶಿವರಾಜ ಇದ್ದರು.