ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕಷಿ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಬರುವ ಐದು ವರ್ಷಗಳ ಅವಧಿಗೆ ಸೋಮವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಬಾಬು ಬಸಪ್ಪ ಗಲಗಲಿ, ಉಪಾಧ್ಯಕ್ಷರಾಗಿ ಶಿದ್ದರಾಮ ಗಂಗಪ್ಪ ಮಾಂಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆಶಾ ಬಿರಾದಾರ ಘೋಷಿಸಿದರು.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ನಡೆಯಿತು. ಬಳಿಕ ಗ್ರಾಮದ ಮುಖಂಡರು ಹಾಗೂ ನಿರ್ದೇಶಕರು ಸೇರಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸತ್ಕರಿಸಿ ಗೌರವಿಸಿದರು.
ಅಧ್ಯಕ್ಷ ಬಾಬು ಗಲಗಲಿ ಮಾತನಾಡಿ, ರೈತರ ಬೇಡಿಕೆ ಹಾಗೂ ಸಮಸ್ಯೆಗೆ ಸ್ಪಂಧಿಸುವುದರ ಜತೆಗೆ ಸಂಘದ ಸರ್ವ ಸದಸ್ಯರ ಏಳಿಗೆಗಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ನಿರ್ದೇಶಕರಾದ ಮುರಗೇಪ್ಪ ಗಲಗಲಿ, ಶಿವಪಾದ ಅವಟಿ, ಶ್ರೀಮಂತ ಬಸರಿಖೋಡಿ, ಅಶೋಕ ಗಲಗಲಿ, ಅನ್ನಪೂರ್ನಾ ನಾಯಿಕ, ವಿಜಯಕುಮಾರ ಗಲಗಲಿ, ಮಲ್ಲಿಕಾರ್ಜುನ ಘೋಸರವಾಡ, ಮುರಗೆಪ್ಪ ಗಲಗಲಿ, ಶಿವಪಾದ ಅವಟಿ, ಶ್ರೀಮಂತ ಬಸರಿಖೋಡಿ, ಅಶೋಕ ಜಮಖಂಡಿ, ಬಸಪ್ಪ ಗಲಗಲಿ, ಬಾಬು ಶಿರಗುಪ್ಪಿ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅಣ್ಣಪ್ಪ ಬೆಳ್ಳಂಕಿ, ಶ್ರೀಪತಿ ಭೋಸಲೆ, ಬಸವರಾಜ ಗಲಗಲಿ, ಗದಿಗೆಪ್ಪ ನಾಯಿಕ ಇತರರು ಇದ್ದರು.