ಜಿಲ್ಲೆ

ಶ್ರೀಕೃಷ್ಣಯಜುರ್ವೆದ ಘನಪಾರಾಯಣ ಆ.3ರಿಂದ

ಶಿರಸಿ: ತಾಲೂಕಿನ ಸೋಂದಾ ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಅಡಿಯಲ್ಲಿ ಆ.3ರಿಂದ 10 ರವರೆಗೆ 8 ದಿನಗಳ ಕಾಲ ಶ್ರೀಕೃಷ್ಣಯಜುರ್ವೆದ ಘನಪಾರಾಯಣವನ್ನು ಆಯೋಜಿಸಲಾಗಿದೆ.

ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 33ನೇ ಚಾತುರ್ವಸ್ಯದ ಸಂದರ್ಭದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪ್ರತಿದಿನ ಬೆಳಗ್ಗೆ 8ಗಂಟೆಯಿಂದ 1ಗಂಟೆಯವರೆಗೆ ಶ್ರೀಕೃಷ್ಣಯಜುರ್ವೆದ ಘನಪಾರಾಯಣ ನಡೆಯಲಿದೆ.

ಮಧ್ಯಾಹ್ನ 3.30 ರಿಂದ 4.30 ರವರೆಗೆ ವಿದ್ವಾಂಸರಿಂದ ವೇದವಾಙ್ಮಯಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಂಜೆ 5 ಗಂಟೆಯಿಂದ 7ಗಂಟೆಯವರೆಗೆ ವರ್ಣಕ್ರಮ ಪಾರಾಯಣ ಜರುಗಲಿದೆ.

ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ವೇದವಿದ್ವಾಂಸರು, ನಿತ್ಯಾಗ್ನಿಹೋತ್ರಿಗಳೂ ಆದ ವೇ.ಬ್ರ. ಶ್ರೀ ಜಂಭೂನಾಥ ಘನಪಾಠಿಗಳು, ಕೊಯಂಬತ್ತೂರು ಹಾಗೂ ಇನ್ನಿತರ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ.

ವೈದಿಕ ಪ್ರಪಂಚದಲ್ಲಿ ವಿಶಿಷ್ಟವೂ, ದುರ್ಲಭವೂ ಆದ 8 ದಿನಗಳ ಕಾಲ ನಡೆಯುವ ಈ ಪಾರಾಯಣ ಸತ್ರದಲ್ಲಿ ಸಮಸ್ತ ಆಸ್ತಿಕ ಬಂಧುಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂಬುದು ಶ್ರೀಗಳ ಅಪೇಕ್ಷೆಯಾಗಿದೆ ಎಂದು ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.