ನಾಲತವಾಡ ಸಮೀಪದ ಘಾಳಪೂಜಿ ಗ್ರಾಮದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಾಂಕೇತಿಕ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಸಕ ಸಿ.ಎಸ್.ನಾಡಗೌಡ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಡಿ.ಎಂ.ವಜಡೆ, ಯಲ್ಲವ್ವ ಮಾದರ, ಲಕ್ಷ್ಮಣ ರಬ್ಲರ್ ಇತರರಿದ್ದರು. 
ಜಿಲ್ಲೆ

ಘಾಳಪೂಜಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಸಾಂಕೇತಿಕ ಉದ್ಘಾಟನೆ

Vijayapura - Desk - Chinnayya Chinnayyanamath

ನಾಲತವಾಡ: ಮಕ್ಕಳು ಮೂಢನಂಬಿಕೆಗಳಿಂದ ದೂರವಿದ್ದು ಮೌಲ್ಯಯುತ ಶಿಕ್ಷಣ ಪಡೆಯಬೇಕು. ಉನ್ನತ ಗುರಿ ಹೊಂದುವ ಮೂಲಕ ಸಾಧನೆ ಮಾಡಿ ಘಾಳಪೂಜಿ ಗ್ರಾಮದ ಕೀರ್ತಿ ಹೆಚ್ಚಿಸಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಸಮೀಪದ ಘಾಳಪೂಜಿ ಗ್ರಾಮದಲ್ಲಿ ವಸತಿ ಶಿಕ್ಷಣ ಸಂಸ್ಥೆಯಡಿ ನಿರ್ಮಿಸಲಾದ 23 ಕೋಟಿ ರೂ. ವೆಚ್ಚದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಾಂಕೇತಿಕ ಉದ್ಘಾಟನೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳ ಶಿಕ್ಷಣ, ಆಹಾರ ಹಾಗೂ ರಕ್ಷಣೆ ವಿಷಯದಲ್ಲಿ ಸಿಬ್ಬಂದಿ ಜವಾಬ್ದಾರಿಯಿಂದ ಇರಬೇಕು ಎಂದರು. ಪ್ರಾಚಾರ್ಯ ಡಿ.ಎಂ.ವಜಡೆ ಮಾತನಾಡಿ, ಎಸ್‌ಸಿ- ಎಸ್‌ಟಿ ಮಕ್ಕಳ ಹಿತಕ್ಕಾಗಿ ಇಲಾಖೆ ಹಲವಾರು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಗ್ರಾಮದ ಶಾಲೆಯಲ್ಲಿ ಉತ್ತಮ ಒಳಾಂಗಣ, ಸುಸಜ್ಜಿತ ಸೌಲಭ್ಯಗಳನ್ನು ನಿರ್ಮಿಸಿದ್ದರಿಂದ ಮಕ್ಕಳು ಉತ್ತಮ ವಾತಾವರಣದಲ್ಲಿ ಕಲಿಯುವಂತಾಗಿದೆ ಎಂದರು.

ಪ್ರಾಚಾರ್ಯರಾದ ಬಾಲಚಂದ್ರ ಮೇಟಿ, ಬಿ.ಎಸ್.ಕಣಕಾಲಮಠ, ಗಂಗಾಧರ ಜೂಲಗುಡ್ಡ ಮಾತನಾಡಿದರು. ಪಿಕೆಪಿಎಸ್ ನೂತನ ಆಡಳಿತ ಮಂಡಳಿ, ಗ್ರಾಮಸ್ಥರು ಹಾಗೂ ಶಾಲೆಯ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಮಾದರ, ಉಪಾಧ್ಯಕ್ಷ ಲಕ್ಷ್ಮಣ ರಬ್ಲರ್, ಸಂಗಣ್ಣ ನಾಡಗೌಡ, ತಾಪಂ ಮಾಜಿ ಸದಸ್ಯ ಸುರೇಶ ಹುಗ್ಗಿ, ಡಾ.ಸತೀಶ ತಿವಾರಿ, ಎ.ಬಿ.ಗುಳಗಿ, ಪಿಎಸ್‌ಐ ತಿಪ್ಪಾರೆಡ್ಡಿ, ಕೃಷಿ ಅಧಿಕಾರಿ ಸುರೇಶ ಬಾವಿಕಟ್ಟಿ, ಮಲ್ಲಪ್ಪ ಜೂಲಗುಡ್ಡ, ಖುಬಾಸಿಂಗ್ ಜಾಧವ, ಈರಣ್ಣ ನಾಡಗೌಡ, ಪಿಕೆಪಿಎಸ್ ಅಧ್ಯಕ್ಷ ದೊಡ್ಡಬಸು ನಾಡಗೌಡ, ಸಿಡಿಪಿಒ ಮಂಜುನಾಥ ಹೊಸಮನಿ, ಶರಣಗೌಡ ರಡ್ಡೇರ, ಜಿ.ಎಂ.ಕಟ್ಟಿ, ಬಸಪ್ಪ ಗೌಂಡಿ, ಇಂಜಿನಿಯರ್ ಸದಾಶಿವ ಮನಗೂಳಿ, ಸುರೇಶ ಹಿರೇಮಠ ಇದ್ದರು. ಶಿಕ್ಷಕ ಮಲ್ಲು ಭಜಂತ್ರಿ ನಿರೂಪಿಸಿದರು. ಎಸ್.ಬಿ.ರಡ್ಡೇರ ಸ್ವಾಗತಿಸಿದರು. ಪ್ರವಿಣ ಹುಗ್ಗಿ ವಂದಿಸಿದರು.