ಜಿಲ್ಲೆ

ಗ್ರಾಮೀಣ ಸೊಗಡಿನ ಮಡಿಲು ಗೆಜ್ಜಗಾರ ಗುಪ್ಪೆ

* ಮೈಸೂರು ಅರಮನೆಯ ವಿದ್ವಾನ್ ವಿದ್ಯಾರಾಜ ಅರಸು ಸ್ಥಾಪಿಸಿದ ಗ್ರಾಮ

* ಸೌಹಾರ್ದತೆಗೆ ಹೆಸರುವಾಸಿ

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ

ಪ್ರತಿಯೊಂದು ಗ್ರಾಮಗಳು ತನ್ನದೆಯಾದ ವಿಶೇಷ, ವೈಶಿಷ್ಟ್ಯಹೊಂದಿವೆ. ಅಂತಹ ಗ್ರಾಮಗಳಲ್ಲಿ ಗೆಜ್ಜಗಾರ ಗುಪ್ಪೆಯೂ ಒಂದು. ಇದು ಸಾಕಷ್ಟು ಗ್ರಾಮೀಣ ಸೊಗಡನ್ನು ಹೊಂದಿಕೊಂಡಿದೆ.

ಮಾಗಡಿ ಪಟ್ಟಣದಿಂದ ಸುಮಾರು 17 ಕಿಮೀ ದೂರದಲ್ಲಿ ಇರುವುದೇ ಗೆಜ್ಜಗಾರ ಗುಪ್ಪೆ. ಗ್ರಾಮದಲ್ಲಿ 1300ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಕೃಷಿಕರು, ಜಾನಪದ ಕಲಾವಿದರು, ಉನ್ನತ ಹುದ್ದೆಯಲ್ಲಿರುವರೇ ಹೆಚ್ಚು ಮಂದಿ ಇದ್ದಾರೆ.

ಗಜಪುರಿ ಸ್ಥಾಪಕ ಮೈಸೂರು ಅರಮನೆಯ ವಿದ್ವಾನ್ ಆಗಿದ್ದ ವಿದ್ಯಾರಾಜ ಅರಸು, ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ಅರಮನೆಯಲ್ಲಿ ಮಹಾ ಭಾರತವನ್ನು ಪಟಣ ಮಾಡುವ ವೇಳೆ ಹೊಟ್ಟೆಯನ್ನು ಬಗೆದು ಕರುಳನ್ನು ದೀಪದ ಬತ್ತಿಗೆಯನ್ನಾಗಿ, ಕೊಬ್ಬನ್ನು ಎಣ್ಣೆಯನ್ನಾಗಿ ಬಳಸಿಕೊಂಡು ಓದುತ್ತಿರುವ ಬಗ್ಗೆ ರಾಜರ ಗಮನಕ್ಕೆ ಬಂತು. ಆ ವೇಳೆ ರಾಜರು ತಬ್ಬಿಂಗೆ ನೀರು ತಂದು ಅಪರಾಧವನ್ನು ಮನ್ನಿಸುವಂತೆ ವಿದ್ಯಾರಾಜರಿಗೆ ಮನವಿ ಮಾಡಿ, ನನ್ನಿಂದ ಏನಾಗಬೇಕೆಂದು ಕೇಳಿದರು. ಈ ವೇಳೆ ನಮಗೆ ಜಾಗ ನೀಡುವಂತೆ ವಿದ್ಯಾರಾಜರು ಮನವಿ ಮಾಡಿದರು. ಈ ಮೇರೆಗೆ ಮೈಸೂರಿನಿಂದ ರಾಜರ ಸಮೇತ ಹೊರಟ ಆನೆ 500 ಎಕರೆ ಪ್ರದೇಶದಲ್ಲಿ ಸುತ್ತು ಬಂದು ನಿಂತ ಕಾರಣ ಈ ಗ್ರಾಮಕ್ಕೆ ಗಜಪುರಿ ಎಂದು ಕರೆಯಲಾಗಿತ್ತು. ನಂತರ ಗಜಪುರಿ ಆಡು ಭಾಷೆಯಲ್ಲಿ ಗೆಜ್ಜಗಾರ ಗುಪ್ಪೆ ಎಂದು ಪರಿವರ್ತನೆ ಯಾಗಿದೆ.

ವಿದ್ಯಾರಾಜರ ದೇವಾಲಯ

ಗ್ರಾಮ ಗುರುತಿಸಿದ ಆನೆ ಮೃತಪಟ್ಟ ಸ್ಥಳದಲ್ಲೇ ಜೀವಂತ ಸಮಾಧಿಯಾದ ವಿದ್ಯಾರಾಜರ ದೇವಾಲಯವನ್ನು ನಿರ್ಮಿಸಲಾಗಿದೆ. ಆ ದೇವಾಲಯದಲ್ಲಿ ಇಂದಿಗೂ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಸಾಕಷ್ಟು ಪ್ರಸಿದ್ಧಿ ಹೊಂದಿದೆ. ವಿದ್ಯಾರಾಜರ ಪತ್ನಿ ಭಾರತ ಅಮ್ಮಣ್ಣಿ ಅವರು ಜೀವಂತ ಅಗ್ನಿಪ್ರವೇಶವಾಗಿದ್ದಾರೆ. ಮೈಸೂರು ಮಹಾರಾಜರ ಆಡಳಿತದಲ್ಲಿ ರಾಜರಿಗೆ ಜೈಪರಾಕ್ ಹೇಳುವ ಹೊಗಳು ಭಟ್ಟರಿಗೆ ಗ್ರಾಮದ ಬಳಿ ಮೈಸೂರು ಮಹಾರಾಜರು ಜಮೀನು ನೀಡಿದರು. ಗ್ರಾಮದಲ್ಲಿ ಪಟ್ಟಲದಮ್ಮ ದೇವಾಲಯ, ವೀರಭದ್ರ ದೇವಾಲಯ, ಕೃಷ್ಣಸ್ವಾಮಿ ದೇವಾಲಯ, ಮುರಾರಿ ಸ್ವಾಮಿ ಜೀವಂತವಾಗಿ ಸಮಾಧಿಯಾಗಿರುವ ಮುರಾರಿ ಮಠಗಳು ಸೇರಿ ಎಲ್ಲ ದೇಗುಲಗಳು ಒಂದು ಸಾವಿರ ವರ್ಷ ಇತಿಹಾಸ ಹೊಂದಿವೆ. ಪ್ರತಿ ವರ್ಷದ ಜನವರಿ ಮೊದಲವಾರದಲ್ಲಿ ಪಟ್ಟಲದಮ್ಮ ಜಾತ್ರಾ ಮಹೋತ್ಸವ ನಡೆಯಲಿದೆ.

ಸೌಹಾರ್ದತೆಗೆ ಹೆಸರುವಾಸಿ

ಹಿಂದು, ಮುಸ್ಲಿಂ ಸೇರಿ ಎಲ್ಲ ಸಮುದಾಯದವರು ಅನೂನ್ಯವಾಗಿ ಬಾಳ್ವೆಯಿಂದ ಹೋಗುತ್ತಿದ್ದಾರೆ. ಗ್ರಾಮದಲ್ಲಿನ ಮುಸ್ಲಿಂ ದರ್ಗಕ್ಕೆ ಹಿಂದುಗಳು ತೆರಳಿ ಪೂಜೆ ಸಲ್ಲಿಸಿ ಬಾಬಯ್ಯನ ಮೊಹರಾಂ ಹಬ್ಬವನ್ನು ಆಚರಿಸುತ್ತಾರೆ. ಗ್ರಾಮ ಸರ್ವಜನಾಂಗದ ಶಾಂತಿಯ ತೋಟದಂತಿದೆ.

ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಚೆ ಕಚೇರಿ, ಹಾಲು ಉತ್ಪಾದಕ ಸಹಕಾರ ಸಂಘ, ಸ್ವಸಹಾಯ ಸಂಘ, ಅಂಗನವಾಡಿ ಕೇಂದ್ರ ಹಾಗೂ 100 ವರ್ಷ ಪೂರೈಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದರ್ಗವನ್ನು ಕಾಣಬಹುದು.

ಗೆಜ್ಜಗಾರಗುಪ್ಪೆ ಗ್ರಾಮ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಎಲ್ಲ ಜನಾಂಗದವರು ಸೇರಿ ನಿರ್ಮಿಸಿರುವ ಸರ್ವ ಜನಾಂಗದ ಅದ್ಭುತ ತೋಟವಾಗಿ, ಆದರ್ಶ ಗ್ರಾಮವಾಗಿದೆ. ಜಾತಿ, ಧರ್ಮಗಳ ನಡುವೆ ಕಿತ್ತಾಡುವ ವೇಳೆ ನಮ್ಮ ಗ್ರಾಮ ಸೋದರತ್ವ, ಸಹಬಾಳ್ವೆಗೆ ಹೆಸರರಾಗಿದ್ದು. ಪ್ರವಾಸಿ ತಾಣ ಮಾಡುವ ಅರ್ಹತೆ ಹೊಂದಿದೆ.ಬೆಳ್ಳಿಯಪ್ಪಮತ್ತಿಕೆರೆ ಗ್ರಾಪಂ ಮಾಜಿ ಅಧ್ಯಕ್ಷಪುರಾತನ ಕಾಲದ ಗೆಜ್ಜಗಾರಗುಪ್ಪೆ ಸುತ್ತಮುತ್ತಲ ಹತ್ತಾರು ಗ್ರಾಮಗಳಿಗೆ ಹೆಸರಾಗಿ ಪ್ರಸಿದ್ಧಿಹೊಂದಿದೆ, ಎಷ್ಡೇ ಆಧುನಿಕತೆ ಬೆಳೆದರೂ ಗ್ರಾಮದವರು ವ್ಯವಸಾಯ ಮರೆತಿಲ್ಲ. ಈ ಗ್ರಾಮದ ಜನರನ್ನು ಗ್ರಾಮದೇವತೆ ಪಟ್ಟಲದಮ್ಮ ಕಾಯುತ್ತಿದ್ದಾರೆ.ಕೆಂಪಜುಂಜರಾಜು ಅರಸುವಿದ್ಯಾರಾಜರ ಸಂತತಿ