ಬೆಳ್ತಂಗಡಿ: ದೇಯಿ ಬೈದೆದಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾ.1ರಿಂದ 5ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವ ಯಶಸ್ಸುಗೊಳಿಸುವ ಬಗ್ಗೆ ತಾಲೂಕಿನ ಶ್ರೀ ಗುರು ನಾರಾಯಣ ಸೇವಾ ಸಂಘ ನಡದಲ್ಲಿ ನಡ ಹಾಗೂ ನಾವೂರು ಗ್ರಾಮಗಳ ಗೆಜ್ಜೆಗಿರಿಯ ಭಕ್ತರ ಸಮಾಲೋಚನಾ ಸಭೆ ನಡೆಯಿತು.
ನಡ ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ವೀರಪ್ಪ ಪೂಜಾರಿ ಕೊಟ್ಲಪ್ಪಾಡಿ ಜಾತ್ರೋತ್ಸವದ ಆಮಂತ್ರಣ ಬಿಡುಗಡೆಗೊಳಿಸಿದರು. ಶ್ರೀಕ್ಷೇತ್ರ ಗೆಜ್ಜಗಿರಿ ಜಾತ್ರೋತ್ಸವ ಸಮಿತಿ ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ ಶ್ರೀ ಕ್ಷೇತ್ರದಲ್ಲಿ ನಡೆಯುವ ಮಡಿಲು ಸೇವೆ ಹಾಗೂ ಉತ್ಸವದ ಮಾಹಿತಿಯನ್ನು ಸಭೆಗೆ ನೀಡಿ ಭಕ್ತರನ್ನು ಜಾತ್ರೋತ್ಸವಕ್ಕೆ ಆಮಂತ್ರಿಸಿದರು.
ಉಪಾಧ್ಯಕ್ಷ ದಿವಾಕರ ಸಾಲಿಯನ್ ಸುರ್ಯ, ಮಹಿಳಾ ಕಾರ್ಯದರ್ಶಿ ಚಿತ್ರಾವತಿ ಭಂಡಾರಿಕೋಡಿ, ಮಾಜಿ ಅಧ್ಯಕ್ಷ ರಮೇಶ್ ಕೋಟ್ಯಾನ್ ಕುತ್ರೊಟ್ಟು, ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ನಿರ್ದೇಶಕ ಜಯಕುಮಾರ್ ಸುರ್ಯ, ನಾವೂರು ಬಿಲ್ಲವ ಸಂಘದ ಅಧ್ಯಕ್ಷ ಸುದರ್ಶನ ನಾವೂರು, ಕಾರ್ಯದರ್ಶಿ ಪ್ರಕಾಶ್ ಕಣಾಲು, ಗೌರವ ಸಲಹೆಗಾರರಾದ ಉಮೇಶ್ ಹೊಕ್ಕಿಲ, ಕೃಷ್ಣಪ್ಪ ಪೂಜಾರಿ ಕುದುಪುಲ, ಶುಭಕರ ಕೆ.ಎಂ.ಕೂಡೇಲು, ಲಾಯಿಲ ಜಿಪಂ ಸಂಚಾಲಕ ಸೌಮ್ಯಾ, ಭಕ್ತರು ಉಪಸ್ಥಿತರಿದ್ದರು.
ನಡ ಶ್ರೀ ಗುರುರಾಯಣ ಸೇವಾ ಸಂಘಕ್ಕೆ ಕಪಾಟು ಕೊಡುಗೆಯಾಗಿ ನೀಡಿರುವ ವೀಣಾ ಕೋಯಗುಡ್ಡೆ ನಡ ಅವರನ್ನು ಗೌರವಿಸಲಾಯಿತು. ಶ್ರೀ ಗುರುನಾರಾಯಣ ಸೇವಾ ಸಂಘ ನಡ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಕೆ.ಭಂಡಾರಿಕೋಡಿ ನಿರೂಪಿಸಿದರು.