ಜಿಲ್ಲೆ

ನಿರ್ಭೀತಿಯಿಂದ ‘ಕ್ಷಯ ರೋಗ’ ತಪಾಸಣೆ ಮಾಡಿಸಿಕೊಳ್ಳಿ

ಶಿಗ್ಗಾಂವಿ: ಪಟ್ಟಣದ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಮಂಗಳವಾರ ಕ್ಷಯ ರೋಗಿಗಳ ಮನೆಯ ಸಂರ್ಪತರಿಗೆ ಸಿ.ವೈ. ಕ್ಷಯರೋಗ ಪರೀಕ್ಷೆ ಅಂದೋಲನಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ಎ ಆರ್. ಚಾಲನೆ ನೀಡಿದರು.

ಕ್ಷಯಮುಕ್ತ ಭಾರತ ಮಾಡಲು ಪ್ರಧಾನಿ ಮೋದಿಯವರು ಸಂಕಲ್ಪ ಮಾಡಿರುವ ಕಾರಣ ಕ್ಷಯರೋಗಿಗಳ ಜತೆಗೆ ಅವರ ಕುಟುಂಬದ ಸದಸ್ಯರು ಸಹಿತ ಕ್ಷಯರೋಗ ಮುಕ್ತವಾಗಿರಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾರ್ವಜನಿಕರು ನಿರ್ಭೀತಿಯಿಂದ ತಪಾಸಣೆಗೆ ಮುಂದಾಗಬೇಕು ಎಂದರು.

ಆಡಳಿತ ವೈದ್ಯಾಧಿಕಾರಿ ಡಾ. ವಿಜಯಾ ಪಾಟೀಲ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಿಬ್ಬಂದಿ ಅಶೋಕ ಅಮಾತ್ಯಣ್ಣವರ, ಶಂಕರ ಕೋರಿಶೆಟ್ಟರ, ಗುರು ಹಾಗಲೂರ ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ಸುಮಾ, ಸಂತೋಷ, ಶೃತಿ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.