ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಡಾ. ಎಂ.ವಿ.ವಿನಯ್ ಉದ್ಘಾಟಿಸಿದರು. ಡಾ. ವಿನಯ್, ವಿಶಾಂತಿ, ಜಯಲಕ್ಷ್ಮೀ, ತಿಪ್ಪೇಶ್, ತೇಜಸ್ವಿನಿ ಇದ್ದರು. 
ಜಿಲ್ಲೆ

ಆರಂಭಿಕ ಹಂತದಲ್ಲೇ ರೋಗಕ್ಕೆ ಚಿಕಿತ್ಸೆ ಪಡೆಯಿರಿ

ಎಸ್.ಎನ್.ರವೀಂದ್ರ

ನ್.ಆರ್.ಪುರ: ಕಣ್ಣು, ಕಿವಿ, ಮೂಗಿನ ಆರೋಗ್ಯದ ಕಾಳಜಿವಹಿಸಿ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ಎಎನ್‌ಟಿ ತಜ್ಞ ಡಾ. ವಿನಯ್ ಹೇಳಿದರು.

ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕಾನೂರು ಗ್ರಾಪಂ ಸಹಯೋಗದಲ್ಲಿ ನಡೆದ ಕಿವಿ, ಮೂಗು, ಗಂಟಲು ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿ, ಕಿವಿ, ಮೂಗಿಗೆ ಯಾವುದೇ ಎಣ್ಣೆ, ವಸ್ತುಗಳನ್ನು ಹಾಕಬಾರದು. ಇವು ಕರ್ಣಪಟಲವನ್ನು ಹಾನಿಗೊಳಿಸುತ್ತವೆ ಎಂದು ತಿಳಿಸಿದರು. ಕಟ್ಟಿನಮನೆ ಪಿಎಚ್‌ಸಿ ಡಾ. ವಿನಯ್ ಮಾತನಾಡಿ, ರೋಗಗಳನ್ನು ಪ್ರಾರಂಭದಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯಲು ಆರೋಗ್ಯ ತಪಾಸಣಾ ಶಿಬಿರಗಳು ಅನುಕೂಲಕರ ಎಂದು ಹೇಳಿದರು. ಕಾನೂರು ಗ್ರಾಪಂ ಸದಸ್ಯರಾದ ವಿಶಾಂತಿ, ಜಯಲಕ್ಷ್ಮೀ, ಸಮುದಾಯ ಆರೋಗ್ಯಾಧಿಕಾರಿ ತಿಪ್ಪೇಶ್, ತೇಜಸ್ವಿನಿ, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು ಇದ್ದರು.