ಸಿಂಧನೂರು: ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಸ್ವಚ್ಛತೆ ಇಲ್ಲದ ಕಾರಣದಿಂದ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ತಾಲೂಕಿನ ಮಲ್ಲದಗುಡ್ಡ ಮತ್ತು 4ನೇ ಮೈಲ್‌ಕ್ಯಾಂಪ್‌ನಲ್ಲಿ ಮಂಗಳವಾರ ಕುಡಿವ ನೀರಿನ ಶುದ್ಧೀಕರಣ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಪ್ರತಿ ಶುದ್ಧೀಕರಣ ಘಟಕಕ್ಕೆ 12 ಲಕ್ಷ ಬಿಡುಗಡೆಯಾಗಿದ್ದು, 2 ಗ್ರಾಮದಲ್ಲಿ ಶುದ್ಧೀಕರಣ ಘಟಕ ಪ್ರಾರಂಭಿಸಲಾಗಿದೆ. ಇವುಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಜವಾಬ್ದಾರಿ ಗ್ರಾಮ ಪಂಚಾಯಿತಿಗೆ ಇದೆ. ಗ್ರಾಮಸ್ಥರು ಸಹ ಸಹಕಾರ ನೀಡಬೇಕು ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ನಲ್ಲ ವೆಂಕಟೇಶ್ವರರಾವ್ ಮಲ್ಲದಗುಡ್ಡ ಮಾತನಾಡಿ, ಶಾಸಕರು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ವಿರುಪಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿರುಪಾಪುರದಿಂದ ಹಟ್ಟಿಯವರೆಗೆ ಡಾಂಬರ್ ರಸ್ತೆ, ಮಲ್ಲದಗುಡ್ಡ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ, ಹಟ್ಟಿ ಕ್ಯಾಂಪಿನಲ್ಲಿ ಸಿಸಿ ರಸ್ತೆ, ಅರಳಹಳ್ಳಿ ಮುಖ್ಯರಸ್ತೆ ಮತ್ತು ಶಾಲಾ ಕಟ್ಟಡ, 7ನೇ ಮೈಲ್ ಕ್ಯಾಂಪ್‌ನಲ್ಲಿ ಸಿಸಿ ರಸ್ತೆ ನಿರ್ಮಿಸಿದ್ದಾರೆ ಎಂದರು.
ಪ್ರಮುಖರಾದ ಶಿವರಾಜ ಅರಳಹಳ್ಳಿ, ಪಂಪಾಪತಿ ಕಾರಟಗಿ, 4ನೇ ಮೈಲ್‌ಕ್ಯಾಂಪ್‌ನ ಕೆ. ಗೋಪಿ, ಛತ್ರಪ್ಪ ಮಲ್ಲದಗುಡ್ಡ, ಹನುಮಂತ ಮೂರುಸಾಲಗಿ, ಬಸವರಾಜ ಜಾಲಿ ಹಾಳ, ಎಂ.ಭಾಸ್ಕರ್, ಸುಬ್ಬಣ್ಣ, ಹುಲಗಪ್ಪ, ಭೀಮಣ್ಣ, ಸುರೇಶಸ್ವಾಮಿ, ದುರ್ಗಪ್ಪ ರವಡಕುಂದ, ನಿಂಗಪ್ಪ ಕುರಿ ಇದ್ದರು.