ಹೂವಿನಹಿಪ್ಪರಗಿ: ಪ್ರಚಲಿತ ವಿದ್ಯಮಾನಗಳಲ್ಲಿ ಪ್ರತಿಯೊಬ್ಬರಿಗೂ ಜೀವ ವಿಮೆ ಸೌಲಭ್ಯ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಲಾಭ ಪಡೆದುಕೊಳ್ಳಬೇಕೆಂದು ವಿಜಯಪುರದ ಪ್ರಾದೇಶಿಕ ವ್ಯವಸ್ಥಾಪಕ ಸಂತೋಷ ನಾಯಕ ಹೇಳಿದರು.
ಸಮೀಪದ ಹುಣಶ್ಯಾಳ ಪಿ.ಬಿ. ಗ್ರಾಮದಲ್ಲಿ ಕೃಷಿ ಜಾಗೃತಿ ಸಪ್ತಾಹ ಹಾಗೂ ರೈತರ ಸಂಧ್ಯಾ ಶಿಬಿರದಲ್ಲಿ ಹಂಚಿನಾಳದ ಶ್ರೀದೇವಿ ವಡ್ಡರ ಅವರಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ 2 ಲಕ್ಷ ರೂಗಳ ಚೆಕ್ ವಿತರಿಸಿ ಅವರು ಮಾತನಾಡಿದರು.
ಪಿ.ಎಂ.ಜೆ.ಜೆ.ಬಿ.ವೈ ಯೋಜನೆಯಲ್ಲಿ 18 ರಿಂದ 50 ವರ್ಷದೊಳಗಿನ ವ್ಯಕ್ತಿ ವಿಮೆ ಮಾಡಿದಲ್ಲಿ ಹಾಗೂ ಬ್ಯಾಂಕ್ ಖಾತೆ ಹೊಂದಿರಬೇಕು. ಪಿ.ಎಂ.ಜೆ.ಜೆ.ಬಿ.ವೈ. ಪಡೆಯಲು ಆತನ ಖಾತೆಯಿಂದ ಸ್ವಯಂ-ಡೆಬಿಟ್‌ನ್ನು ಸಕ್ರಿಯಗೊಳಿಸಲು ಒಪ್ಪಿಗೆ ನೀಡಿರಬೇಕು. ವಿಮೆ ಮಾಡಿ ಆತ ಆಕಸ್ಮಿಕವಾಗಿ ಮರಣವಾದರೆ ಆತನ ಕುಟುಂಬಸ್ಥರಿಗೆ ವಿಮೆ ಹಣ ಬರುತ್ತದೆ ಎಂದರು.
ವಿಜಯಪುರದ ಎಸ್‌ಬಿಐ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೃಷ್ಣಯ್ಯ ವಿ. ಮಾತನಾಡಿ, ಪ್ರತಿಯೊಬ್ಬರಿಗೂ ಬ್ಯಾಂಕಿನ ವ್ಯವಹಾರ ಬೇಕೆ ಬೇಕು. ಈ ನಿಟ್ಟಿನಲ್ಲಿ ಬ್ಯಾಂಕಿನಲ್ಲಿ ಕೃಷಿ ಸಾಲ, ಉದ್ಯೋಗ ಸಾಲ, ಗೃಹ ಸಾಲ ಸೇರಿ ಇನ್ನಿತರ ಸಾಲ ಸೌಲಭ್ಯಗಳ ಜತೆಗೆ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದರು.
ವಿಜಯಪುರ ಎಸ್‌ಬಿಐ ಬ್ಯಾಂಕ್ ಆರ್ಥಿಕ ಸೇರ್ಪಡೆ ವ್ಯವಸ್ಥಾಪಕ ಪಾಂಡಪ್ಪ ಲಮಾಣಿ, ಬಸವನಬಾಗೇವಾಡಿ ಎಸ್‌ಬಿಐ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ರಾಘವೇಂದ್ರ ಕಟ್ಟಿ ಮಾತನಾಡಿದರು. ಉಪವ್ಯವಸ್ಥಾಪಕ ಸತೀಶ ಪಾಟೀಲ, ಕ್ಷೇತ್ರ ಅಧಿಕಾರಿ ಕಿರಣಕುಮಾರ ಢವಳಗಿ, ಆರ್ೀ ಕೌಹೀರ್, ಹೀತೇಕರ ಜಾಗೀರದಾರ ಇತರರಿದ್ದರು.