ಮೈಸೂರು: ಶಿಕ್ಷಣದಿಂದ ಸಂಸ್ಕಾರ ಪಡೆದು ಉನ್ನತಿ ಸಾಧಿಸಬೇಕು ಎಂದು ಕೆಎಂಎಫ್ ಹಿರಿಯ ಉಪ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಸಲಹೆ ನೀಡಿದರು.
ನಗರದ ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೈಸೂರು ಜಿಲ್ಲಾ ವಿಶ್ವಕರ್ಮ ನೌಕರರ ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಮಾನವೀಯತೆ ರೂಢಿಸಿಕೊಳ್ಳಬೇಕು. ಸಮಾಜ ಬೆಳೆಯಲು ಸಂಘಟನೆ ಅತೀ ಮುಖ್ಯ. ಇಲ್ಲದಿದ್ದರೆ ಪ್ರಗತಿ ಕುಂಠಿತವಾಗುತ್ತದೆ ಎಂದರು.
ತಿ.ನರಸೀಪುರ ತಹಸೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ಮಾತನಾಡಿ, ಸಂಘ ಪ್ರಾರಂಭ ಮಾಡುವುದೇ ಸವಾಲು. ಪ್ರಾರಂಭವಾದ ಮೇಲೆ ಉದ್ದೇಶಗಳನ್ನು ಪೂರೈಸುವುದೂ ಅಷ್ಟೇ ಸವಾಲು. ಗುರಿ ಸಾಧಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ಶಿಲ್ಪಿ ಅರುಣ್ ಯೋಗಿರಾಜ್ ಕಾರ್ಯಕ್ರಮ ಉದ್ಘಾಟಿಸಿ ಸಂಘದ ಲಾಂಛನ ಬಿಡುಗಡೆಗೊಳಿಸಿದರು. ಇದೇ ಸಂದರ್ಭ ಶಿಲ್ಪಿ ಅರುಣ್ ಯೋಗಿರಾಜ್, ಕೊಡಗು ಜಿಲ್ಲೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ತಿ.ನರಸೀಪುರ ತಹಸೀಲ್ದಾರ್ ಟಿ.ಜಿ.ಸುರೇಶ್ ಆಚಾರ್, ಕೆಎಂಎಫ್ ಹಿರಿಯ ಉಪ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ವಿರಾಜಪೇಟೆ ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಎಸ್. ಶಿವರುದ್ರ, ನಿವೃತ್ತ ಮೆಡಿಕಲ್ ಅಧಿಕಾರಿ ಡಾ.ವಿ. ಜಗನ್ನಾಥಾಚಾರ್, ಮೈಸೂರಿನ ಸೇಠ್ ಮೋಹನ್ ದಾಸ್ ತುಳಸಿದಾಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಕೆ.ಎಸ್. ತೇಜಸ್ವಿನಿ, ಜೆಎಸ್‌ಎಸ್ ಆಸ್ಪತ್ರೆಯ ಕ್ಯಾನ್ಸರ್ ರೋಗ ತಜ್ಞ ಡಾ.ಪಿ.ಕೆ.ಕಿರಣ್, ಜೆಎಸ್‌ಎಸ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಕೆ.ಆರ್.ಸಹನಾ, ಹುಣಸೂರು ತಾಲೂಕಿನ ತಟ್ಟೇಕೆರೆ ಹಿರಿಯ ವೈದ್ಯಾಧಿಕಾರಿ ಡಾ.ಕೆ.ಹೇಮಂತ್ ಕುಮಾರ್, ಬಿಇಎಂಎಲ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಿ.ಎನ್. ಶಿವಕುಮಾರ್, ಚಿತ್ರ ನಿರ್ದೇಶಕ ಹರವು ಎಸ್.ಲೋಕೇಶ್, ಶಿಲ್ಪಿ ಶ್ರೀಕಾಂತ್‌ಆಚಾರ್, ಬಾಲನಟ ಎಸ್.ದರ್ಶನ್, ಕರಾಟೆಪಟು ವಿದ್ಯಾ ಸಾಗರ್‌ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಎಸ್.ಕಾಂತರಾಜು, ಉಪಾಧ್ಯಕ್ಷ ಎಚ್.ಇ.ಗುರುರಾಜು, ಪ್ರಧಾನ ಕಾರ್ಯದರ್ಶಿ ಮನೋಹರ, ಖಜಾಂಚಿ ಕೆ.ಆರ್.ರಘುನಾಥಾಚಾರ್, ಜಂಟಿ ಕಾರ್ಯದರ್ಶಿ ಬಿ.ಶಂಕರಾಚಾರ್, ಸಹ ಕಾರ್ಯದರ್ಶಿ ಜಿ.ಎನ್.ಶ್ರೀನಿವಾಸ ಮೂರ್ತಿ, ನಿರ್ದೇಶಕ ವೀರಣ್ಣ ಎಂ.ಅರ್ಕಸಾಲಿ, ಕಾನೂನು ಸಲಹೆಗಾರ ಕೆ.ಪಿ.ಶ್ರೀಕಾಂತ ಆಚಾರ್ ಇತರರು ಇದ್ದರು.