ಬೇಳೂರು ಗ್ರಾಮದಲ್ಲಿ ಕಂದಾಯ ಇಲಾಖೆ ಆಯೋಜಿಸಿದ್ದ ಪಿಂಚಣಿ ಅದಾಲತ್ ಅಭಿಯಾನದಲ್ಲಿ ಫಲಾನುಭವಿಗಳಿಗೆ ಮಾಸಾಶನ ಪ್ರಮಾಣ ಪತ್ರ ವಿತರಿಸಲಾಯಿತು. ಉಪ ತಹಸೀಲ್ದಾರ್ ಶ್ರೀನಾಥ ಜೋಶಿ, ವಿಎ ಕರಿಬಸಮ್ಮ, ಪ್ರಮುಖರಾದ ಕೊಟ್ರಪ್ಪ, ಗವಿಸಿದ್ದಪ್ಪ, ಮುದೇಗೌಡ ಇತರರಿದ್ದರು. 
ಜಿಲ್ಲೆ

ಪಿಂಚಣಿ ಸೌಲಭ್ಯ ಪಡೆಯಿರಿ

Kopala - Desk - Eraveni

ಅಳವಂಡಿ: ಸಮೀಪದ ಬೇಳೂರು ಗ್ರಾಮದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಕೊಪ್ಪಳ, ಕಂದಾಯ ಇಲಾಖೆ, ನಾಡ ಕಚೇರಿಯಿಂದ ಶನಿವಾರ ಪಿಂಚಣಿ ಅದಾಲತ್ ಅಭಿಯಾನ ನಡೆಯಿತು.

12 ಜನ ಫಲಾನುಭವಿಗಳಿಗೆ ಮಾಸಾಶನ ಪ್ರಮಾಣ ಪತ್ರ ವಿತರಿಸಲಾಯಿತು. ಉಪ ತಹಸೀಲ್ದಾರ್ ಶ್ರೀನಾಥ ಜೋಶಿ ಮಾತನಾಡಿ, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ತಲುಪಲಿ ಎಂದು ಕಂದಾಯ ಇಲಾಖೆ ಗ್ರಾಮಗಳಿಗೆ ತೆರಳಿ ಕಂದಾಯ ಅದಾಲತ್ ನಡೆಸುತ್ತಿದ್ದು, ಅರ್ಹರು ಲಾಭ ಪಡೆದುಕೊಳ್ಳಬೇಕು ಎಂದರು. ಗ್ರಾಮ ಆಡಳಿತ ಅಧಿಕಾರಿ ಕರಿಬಸಮ್ಮ, ಪ್ರಮುಖರಾದ ಕೊಟ್ರಪ್ಪ ಹಕಾರಿ, ಗವಿಸಿದ್ದಪ್ಪ ಪೂಜಾರ, ಮುದೇಗೌಡ ಪೊಲೀಸ್‌ಪಾಟೀಲ, ವೆಂಕಣ್ಣ ಚೆಲ್ಲಾ, ಹೊನಕೇರಪ್ಪ ಮೀನಪಟ್ಟಿ ಇತರರಿದ್ದರು.