ಹನುಮಸಾಗರ ಸಮೀಪದ ಮದ್ನಾಳ ಗ್ರಾಮದಲ್ಲಿ ಕಂದಾಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಂದಾಯ ನಿರೀಕ್ಷಕ ಉಮೇಶಗೌಡ ಪಾಟೀಲ್, ಗ್ರಾಮ ಆಡಳಿತಾಧಿಕಾರಿ ರವಿ ಮದನ ಇತರರಿದ್ದರು. 
ಜಿಲ್ಲೆ

ಪಿಂಚಣಿ ಅದಾಲತ್ ಸೌಲಭ್ಯ ಪಡೆದುಕೊಳ್ಳಲಿ

ಗಾಯತ್ರಿ ಮಾಲಿಪಾಟೀಲ್

ಹನುಮಸಾಗರ: ಸಾರ್ವಜನಿಕರು ಪಿಂಚಣಿ ಸೌಲಭ್ಯ ಪಡೆಯಲು ತಹಸಿಲ್ ಕಾರ್ಯಾಲಯ ಹಾಗೂ ನಾಡಕಚೇರಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಪಿಂಚಣಿ ಅದಾಲತ್ ಯೋಜನೆ ಜಾರಿಗೊಳಿಸಿದೆ ಎಂದು ಹನುಮನಾಳ ಹೋಬಳಿ ಕಂದಾಯ ನಿರೀಕ್ಷಕ ಉಮೇಶಗೌಡ ಪಾಟೀಲ್ ಹೇಳಿದರು.

ಸಮೀಪದ ಮದ್ನಾಳ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಪ್ರಮಾಣ ಪತ್ರಗಳು ಅವಶ್ಯಕ. ಮಾಸಾಶನ ನಿಂತು ಹೋದಲ್ಲಿ, ಪಿತ್ರಾರ್ಜಿತ ಆಸ್ತಿ ವರ್ಗಾವಣೆ, ಪೋತಿ ಮಾಡಿಸಿಕೊಳ್ಳುವುದು ಸೇರಿ ವಿವಿಧ ಸವಲತ್ತುಗಳನ್ನು ಪಿಂಚಣಿ ಅದಾಲತ್ ಸ್ಥಳದಲ್ಲಿಯೇ ಪಡೆಯಬಹುದು. ಅರ್ಜಿ ತಿರಸ್ಕೃತವಾದರೆ ಪರಿಹಾರ ಸೂಚಿಸಲಾಗುತ್ತದೆ. ಸಾರ್ವಜನಿಕರು ಪಿಂಚಣಿ ಅದಾಲತ್ ಸೌಲಭ್ಯ ಪಡೆದುಕೊಳ್ಳಬೇಕು. ಅರ್ಹರು ಸೂಕ್ತ ದಾಖಲೆಗಳನ್ನು ನೀಡಿದರೆ ಸ್ಥಳದಲ್ಲೇ ಪ್ರಮಾಣ ಪತ್ರ ನೀಡಲಾಗುವುದು ಎಂದರು.

ಫಲಾನುಭವಿಗಳಾದ ಹನುಮಪ್ಪ ಕೊಪ್ಪಳ, ನಿಂಗವ್ವ ಗಾಣದಾಳ, ಕಸ್ತೂರೆವ್ವ ನೆರತೆಲಿ, ದೇವಕ್ಕ ಕೊಪ್ಪಳ, ಭೀಮನಗೌಡ ಮಾಲಿಪಾಟೀಲ್, ಈರಪ್ಪ ಹೂಗಾರ, ಕೆಂಚಪ್ಪ ಹರಿಜನ, ಕಳಕಪ್ಪ ಗುರಿಕಾರ, ದ್ಯಾಮವ್ವ ಗುರಿಕಾರ, ಶಿವಮೂರ್ತಿಪ್ಪ ಮಾಳಶೆಟ್ಟಿ ಇತರರಿದ್ದರು.