ಮಾಂಜರಿ: ಸಹಕಾರಿಯಿಂದ ನೀಡಲಾಗುವ ಸಾಲ ಸೌಲಭ್ಯದ ಸುದುಪಯೋಗ ಪಡೆದು ಸದಸ್ಯರು ಆರ್ಥಿಕ ಸ್ವಾವಲಂಬನೆ ಸಾಸಬೇಕು ಎಂದು ಪಾರ್ಶ್ವನಾಥ ಸಹಕಾರಿ ಸಮೂಹದ ಸಂಸ್ಥಾಪಕ ಅಧ್ಯಕ್ಷ ಭರತೇಶ ಬನವಣೆ ಹೇಳಿದರು.
ಸಮೀಪದ ನಸಲಾಪುರ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಪಾರ್ಶ್ವನಾಥ ಸಹಕಾರಿ ಸಮೂಹದ 6 ಸಹಕಾರಿ ಸಂಸ್ಥೆಗಳ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.
ಆರು ಸಹಕಾರಿ ಸಂಸ್ಥೆಗಳು 1.14 ಕೋಟಿ ರೂ. ಲಾಭ ಗಳಿಸಿವೆ. 56.81 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿವೆ. ಸಮೂಹದ ಎಲ್ಲ ಸಂಸ್ಥೆಗಳ ಸದಸ್ಯರಿಗೆ ಅಪಘಾತ ವಿಮೆ ಮತ್ತು ಸಾಲಗಾರರಿಗೂ ವಿಮಾ ಸೌಲಭ್ಯ ನೀಡುವ ಬಗ್ಗೆ ಕಂಪನಿಯಿಂದ ಮಾಹಿತಿ ಪಡೆದು ಜಾರಿಗೆ ತರುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಸಹಕಾರಿ ಸಮೂಹದ ಎಲ್ಲ ಸಂಘಗಳ ಕಾರ್ಯದರ್ಶಿಗಳು ವರದಿ ಓದಿದರು. ಮುಖಂಡರಾದ ಪ್ರಕಾಶ ಕಾಂತೆ, ಜಯಪಾಲ ಬನವಣೆ, ಪಾಸಗೌಡ ಪಾಟೀಲ, ಮಹಾವೀರ ಪಾಟೀಲ, ರಾಜುಗೌಡ ಪಾಟೀಲ, ಖಾನಸಾಬ್ ನದಾಫ್, ಸಾತಪ್ಪ ತೊರಸೆ, ಅಣ್ಣಾಸಾಬ ಪಾಟೀಲ, ದಾದಾಸಾಹೇಬ ಪಾಟೀಲ, ಕುಬೇರ ಪರಮಾಜೆ, ಮಹಾವೀರ ಪಾಟೀಲ, ಈರಗೌಡ ಹರಗಾಜೆ ಇತರರಿದ್ದರು.