ಜಿಲ್ಲೆ

ದೇಶ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಿ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ದೇಶ ರಕ್ಷಣೆಯ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಡಾ.ಎಲ್.ಡಿ. ಹೊರಕೇರಿ ಹೇಳಿದರು.

ಹುಬ್ಬಳ್ಳಿಯ ಕೆಎಲ್​ಇ ಸಂಸ್ಥೆಯ ಪಿ.ಸಿ. ಜಾಬಿನ ವಿಜ್ಞಾನ ಕಾಲೇಜಿನಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಪದವಿ ಪೂರ್ವ ಪ್ರಾಚಾರ್ಯ ವಿ.ಆರ್. ವಾಗ್ಮೋಡಿ ಅವರು ಎನ್​ಸಿಸಿ ಮತ್ತು ಎನ್​ಎಸ್​ಎಸ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸುಬೇದಾರ ಪರಶುರಾಮ ದಿವಾನಂದ ಅವರನ್ನು ಸನ್ಮಾನಿಸಲಾಯಿತು. ಸಹನಾ ನವಲಿ ಭಾಷಣ ಮಾಡಿದರು. ಸೃಷ್ಟಿ ಸಾಲಿಮಠ ಹಾಗೂ ಹರ್ಷವರ್ಧನ ಪೆರೂರ ದೇಶ ಭಕ್ತಿಗೀತೆ ಹಾಡಿದರು. ಸಾಕ್ಷಿ ಶಿರಳ್ಳಿ ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಎನ್​ಸಿಸಿ ಮತ್ತು ಎನ್​ಎಸ್​ಎಸ್ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು.

ಮಹಾವಿದ್ಯಾಲಯದ ಬಿಸಿಎ ವಿಭಾಗದ ಸಂಯೋಜಕ ಪೊ›. ಸುನೀಲ ವೆರ್ಣೆಕರ್, ಡಾ.ಸುಧಾ ಪಾಟಿಲ, ಎನ್​ಎಸ್​ಎಸ್ ಅಧಿಕಾರಿ ಡಾ. ಎಲ್. ಸಿ. ಕುಲಕರ್ಣಿ, ಎನ್​ಸಿಸಿ ಅಧಿಕಾರಿ ಕ್ಯಾ. ಡಾ. ಪ್ರಭಾಕರನ್, ಲೆಫ್ಟಿನೆಂಟ್ ಡಾ. ವೀಣಾ, ವೇಣುಗೋಪಾಲ ಎಚ್.ಆರ್., ಅಮೃತಾ ಅಣ್ಣಿಗೇರಿ, ಇತರರು ಇದ್ದರು. ಪ್ರೊ. ಸುನೈನಾ ಎಂ.ಎಂ. ನಿರೂಪಿಸಿದರು.