ಹನುಮಸಾಗರ: ಪ್ರತಿಯೊಬ್ಬ ಖಾತೆದಾರರು ಕುಟುಂಬ ಸದಸ್ಯರ ಅನುಕೂಲಕ್ಕಾಗಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯ (ಪಿಎಂಜೆಜೆಬಿವೈ) ವಿಮೆ ಮಾಡಿಸಬೇಕು ಎಂದು ಶಾಖಾ ವ್ಯವಸ್ಥಾಪಕ ಸಂತೋಷ ಉಪನಾಳ ಹೇಳಿದರು.
ಇದನ್ನೂ ಓದಿ:ಬೆಳೆ ವಿಮೆ ನೋಂದಣಿಗೆ ಮನವಿ
ಸಮೀಪದ ಹೂಲಗೇರಾ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಪಿಎಂಜೆಜೆಬಿವೈ ಅಡಿ ವಿಮೆ ಮಾಡಿಸಿ ಮರಣ ಹೊಂದಿದ ಬಂಡರಗಲ್‌ಲ್ ಗ್ರಾಮದ ದುರಗಪ್ಪ ಹರಿಜನ ಅವರ ಪತ್ನಿ ಹನಮವ್ವಗೆ ಮಂಗಳವಾರ 2ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು. ದುರಗಪ್ಪ ಪ್ರತಿ ವರ್ಷ 436ರೂ. ಪಾವತಿಸಿದ್ದರು. ಅವರು ನಿಧನರಾದ ಕಾರಣ ಖಾತೆಗೆ ನಾಮಿನಿಯಾದ ಅವರ ಪತ್ನಿಗೆ ಪರಿಹಾರದ ಮೊತ್ತ ನೀಡಲಾಗುತ್ತಿದೆ. ಪಿಎಂಜೆಜೆಬಿವೈ ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, 2ಲಕ್ಷ ರೂ. ಲೈಫ್ ಕವರ್ ಮೊತ್ತ ಕುಟುಂಬಕ್ಕೆ ನೀಡಲಾಗುತ್ತದೆ. ಎಲ್ಲರೂ ವಿಮೆ ಮಾಡಿಸಿ ಎಂದರು.
ಬ್ಯಾಂಕ್ ಅಧಿಕಾರಿ ಸುದರ್ಶನ್, ಸಿಬ್ಬಂದಿ ರವಿಕುಮಾರ, ಹನುಮಂತ ಇತರರಿದ್ದರು.