ಜಿಲ್ಲೆ

ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲಿ

ನಂದೇಶ್ವರ: ಕೆನರಾ ಬ್ಯಾಂಕ್​ನಿಂದ ಕಡಿಮೆ ಹಣದಲ್ಲಿ ಹೆಚ್ಚಿನ ವಿಮೆ ಸೌಲಭ್ಯ ಹಾಗೂ ಆರ್ಥಿಕ ಭದ್ರತೆ ಕಲ್ಪಿಸುವ ವಿವಿಧ ಯೋಜನೆಗಳಿದ್ದು, ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕೆನರಾ ಬ್ಯಾಂಕ್​ ಚಿಕ್ಕೋಡಿ ವಿಭಾಗದ ಶಾಖಾಧಿಕಾರಿ ಅಂದಾನಿ ಪ್ರಸನ್ನ ಹೇಳಿದರು.

ಗ್ರಾಮದ ಹನುಮಾನ ದೇವರ ಸಭಾಭವನದಲ್ಲಿ ಸಂಜೀವಿನಿ ಸ್ವಸಹಾಯ ಸಂದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಆರ್ಥಿಕ ಸಾರತಾ ಶಿಬಿರ ಹಾಗೂ ಸಾಮಾಜಿಕ ಭದ್ರತಾ ಸೇವೆಗಳ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸತ್ತಿ ಶಾಖಾಧಿಕಾರಿ ವೆಂಕಣ್ಣ ಬಂಡಿ ಮಾತನಾಡಿದರು.

ಪಿಡಿಒ ಎಸ್​.ಟಿ. ಸರನಾಯಕ, ಗ್ರಾಪಂ ಸದಸ್ಯ ಮಲ್ಲಪ್ಪ ಅರಗೊಡ್ಡಿ, ಮಲ್ಲಿಕಾರ್ಜುನ ಯಲ್ಲಟ್ಟಿ, ಸಂಜೀವಿನಿ ಮಹಿಳಾ ಒಕ್ಕೂಟದ ಮುಖ್ಯಸ್ಥೆ ಸಂಜನಾ ಸಂಜಯ ಲಾಲಸಿಂಗಿ, ರಮೇಶ ಶಿರಗುಪ್ಪಿ, ಎಸ್​.ಬಿ. ಲಾಲಸಿಂಗಿ, ಪ್ರಕಾಶ ಸಿಂಧೂರ ಹಾಗೂ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.