ಧಾರವಾಡ: ಎನ್‌ಎಂಎ0ಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ 4 ವರ್ಷಗಳವರೆಗೆ ಶಿಷ್ಯವೇತನ ದೊರೆಯಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕೆ.ಇ. ಬೋರ್ಡ್ಸ್ ಹೈಸ್ಕೂಲ್ ಪ್ರಾಚಾರ್ಯ ಎನ್.ಎಸ್. ಗೋವಿಂದರಡ್ಡಿ ಹೇಳಿದರು.
ನಗರದ ರೋಟರಿ ಕ್ಲಬ್ ಆ-ï ಧಾರವಾಡ ಮಿಡ್‌ಟೌನ್ ವತಿಯಿಂದ ಸ್ಪೂರ್ತಿ ಕರಿಯರ್ ಅಕಾಡೆಮಿ ಹಾಗೂ ಕೆ.ಇ. ಬೋರ್ಡ್ಸ್ ಹೈಸ್ಕೂಲ್ ಸಹಯೋಗದೊಂದಿಗೆ ಆಯೋಜಿಸಿದ್ದ ಶಿಕ್ಷಕರ ಸನ್ಮಾನ ಕಾರ್ಯಕ್ರಮ ಮತ್ತು ಎನ್‌ಎಂಎ0ಎಸ್ ಪರೀಕ್ಷಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಧಾರವಾಡ ಮಿಡ್ ಟೌನ್ ಅಧ್ಯಕ್ಷ ಗೋವರ್ಧನ ಭಟ್ ಮಾತನಾಡಿ, ರೋಟರಿ ಸಂಸ್ಥೆಯು ಅನೇಕ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸುತ್ತದೆ. ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿ, ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಹಾಗೂ ಶೈಕ್ಷಣಿಕ ಕಾರ್ಯಾಗಾರಗಳು ಮಹತ್ವ ಪಡೆದಿವೆ ಎಂದರು.
ಇದೇವೇಳೆ ನಗರ ಮತ್ತು ಗ್ರಾಮೀಣ ಪ್ರದೇಶದ 7 ಶಿಕ್ಷಕರಿಗೆ `ಶ್ರೇಷ್ಠ ಶಿಕ್ಷಕ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ಪೂರ್ತಿ ಕರಿಯರ್ ಅಕಾಡೆಮಿ ನಿರ್ದೇಶಕ ಕಾಶಿರಾಜ್ ಕಾಖಂಡಕಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ತಿಕ್ ಆಕಳವಾಡಿ, ದೀಪಕ್ ಆಕಳವಾಡಿ, ಶಿವಯೋಗಿ ಅಮಿನಗಡ, ನವೀನ್ ಕಡ್ಲಾಸ್ಕರ್, ಸುಷ್ಮಾ ಭಟ್, ಭಾರತಿ ಕಡ್ಲಾಸ್ಕರ್ ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.
ಪ್ರದೀಪ್ ನಿರೂಪಿಸಿದರು. ಸಂಗಮೇಶ ವಂದಿಸಿದರು.