ಲಿಂಗಸುಗೂರು: ಸರ್ಕಾರ ರೈತರಿಗೆ ಉಪಯೋಗವಾಗುವ ಪೌತಿ ಖಾತೆ ಆಂದೋಲನ (ಇ-ಪೌತಿ) ಜಾರಿಗೆ ತಂದಿದ್ದು ತಾಲೂಕಿನ ಗ್ರಾಮಸ್ಥರು ಇದರ ಸೌಲಭ್ಯ ಪಡೆಯುವಂತೆ ತಹಸೀಲ್ದಾರ್ ಸತ್ಯಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಹಣಿ ಪತ್ರಿಕೆಯಲ್ಲಿ ಪೌತಿ ಆದಂತಹ ಖಾತೆದಾರರ ಹೆಸರನ್ನು ತೆಗೆದು ಅವರ ವಂಶಸ್ಥರ ಹೆಸರನ್ನು ವಂಶವೃಕ್ಷ ಪ್ರಮಾಣ ಪತ್ರದ ಪ್ರಕಾರ ದಾಖಲು ಮಾಡಲು ಅವಕಾಶ ಕಲ್ಪಿಸಲಾಗಿದ್ದು ತಾಲೂಕಿನಲ್ಲಿ 1,1000 ಕ್ಕೂ ಅಧಿಕ ಪೌತಿ ಖಾತೆದಾರರಿರುವ ಮಾಹಿತಿ ಇದ್ದು ಇದರಿಂದ ಎಲ್ಲ ರೈತರಿಗೆ ಬ್ಯಾಂಕ್ ಸಾಲ ಪಡೆಯಲು, ಬೆಳೆ ವಿಮೆ ಪಡೆಯಲು ಹಾಗೂ ಇನ್ನಿತರ ಸೌಲಭ್ಯ ಪಡೆಯಲು ಸಹಕಾರಿಯಾಗಲಿದ್ದು ರೈತರು ಸಂಬಂಧಪಟ್ಟ ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿ ಪೌತಿ ಖಾತೆ ಮಾಡಿಕೊಳ್ಳುವಂತೆ ತಹಸೀಲ್ದಾರ್ ಕುಮಾರಿ ಸತ್ಯಮ್ಮ ತಿಳಿಸಿದ್ದಾರೆ.