ಕುರುಗೋಡು: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಬಸವನಗೌಡ ಹೇಳಿದರು.
ಸಮೀಪದ ಎಮ್ಮಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಕನಿಷ್ಠ ಆರು ತಿಂಗಳಿಗೊಮ್ಮೆಯಾದರೂ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರತಿದಿನ ವ್ಯಾಯಾಮ, ಯೋಗಾಸನ ಮಾಡಬೇಕು ಎಂದರು.
ಬಿಪಿ, ಶುಗರ್, ಮಲೇರಿಯಾ, ಡೆಂೆ ರೋಗಗಳ ತಪಾಸಣೆ ಮಾಡಲಾಯಿತು. ಆರೋಗ್ಯ ನಿರೀಕ್ಷಣಾಧಿಕಾರಿ ಕೃಷ್ಣಮೂರ್ತಿ, ಶಿಕ್ಷಕರಾದ ಎಸ್.ರಾಮು, ವೈ. ಧನಂಜಯ ರೆಡ್ಡಿ, ಪ್ರಮುಖರಾದ ಹನುಮಂತಪ್ಪ, ಮಾರುತಿ, ಆಶಾ ಕಾರ್ಯಕರ್ತೆ ಕನ್ಯಾಕುಮಾರಿ, ಇಂದ್ರಜ ಇದ್ದರು.