ಗುಳೇದಗುಡ್ಡ ಸಮೀಪದ ಚಿಕ್ಕಮುಚ್ಚಳಗುಡ್ಡದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಬಾದಾಮಿ ತಾಲೂಕು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಪೆಟ್ಲೂರ ಅವರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಬಿ. ದೊಡ್ಡಪ್ಪನವರ, ಶಿಕ್ಷಣ ಸಂಯೋಜಕ ಬಿ.ಕೆ. ಚಿಮ್ಮಲ, ಎಸ್.ಪಿ. ಗೌಡರ ಇತರರಿದ್ದರು. 
ಜಿಲ್ಲೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ನೂರಕ್ಕೆ ನೂರು ಪಡೆಯಲಿ

ದತ್ತಾತ್ರೇಯ ಪಿ ಕುಲಕರ್ಣಿ

ಗುಳೇದಗುಡ್ಡ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಉತ್ತಮ ಫಲಿತಾಂಶ ಬರುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯಲು ವಿದ್ಯಾರ್ಥಿಗಳಿಗೆ ಗುಂಪು ಚರ್ಚೆ, ಪ್ರಶ್ನೆ ಪತ್ರಿಕೆ ಬಿಡಿಸುವುದು, ರಸಪ್ರಶ್ನೆ, ಗಣಿತ ವಿಷಯದಲ್ಲಿ ಮಗ್ಗಿಗಳನ್ನು ಕಂಠ ಪಾಠ ಮಾಡಿಸುವುದು ಸೇರಿ ವಿವಿಧ ಚಟುವಟಿಕೆ ಹಮ್ಮಿಕೊಳ್ಳಬೇಕೆಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಪೆಟ್ಲೂರ ಹೇಳಿದರು.

ಸಮೀಪದ ಚಿಕ್ಕಮುಚ್ಚಳಗುಡ್ಡದ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಸೋಮವಾರ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಕಠಿಣವಾದ ವಿಷಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಓದುವಂತೆ ಮಾಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ನೂತನ ಕ್ಷೇತ್ರಶಿಕ್ಷಣಾಧಿಕಾರಿ ಕೆ.ವಿ. ಪೆಟ್ಲೂರ ಅವರನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಬಿ. ದೊಡ್ಡಪ್ಪನವರ, ಶಿಕ್ಷಣ ಸಂಯೋಜಕ ಬಿ.ಕೆ. ಚಿಮ್ಮಲ, ಎಸ್.ಪಿ. ಗೌಡರ, ಶಾಲೆಯ ಮುಖ್ಯಶಿಕ್ಷಕ ಶಂಕರರಾವ ಕುಲಕರ್ಣಿ, ಹನುಮಪ್ಪ ಹೊಸಮನಿ, ಬಸವರಾಜ ಸಿಂದಗಿಮಠ, ಎಸ್.ಬಿ. ಮುದನೇಗುಡಿ, ಶ್ರೀನಿವಾಸ ಈಳಗೇರ, ಭಾಗ್ಯಲಕ್ಷ್ಮೀ ಟಿ.ಎಚ್., ಕಾವ್ಯಾ ಪಾಟೀಲ, ಕೇಶವ ರಘುವೀರ, ಅಶೋಕ ಪೂಜಾರಿ ಮತ್ತಿತರರಿದ್ದರು.