ಪುತ್ತೂರು: ಭಾರತೀಯ ಕೃಷಿ ಸಂಶೋಧನಾ ಪರಿಷತ್, ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಗೇರು ನರ್ಸರಿ ನಿರ್ವಹಣಾ ತಂತ್ರಜ್ಞಾನ ಕುರಿತು ಎರಡು ದಿನಗಳ ಕೌಶಲಾಭಿವೃದ್ಧಿ ತರಬೇತಿ ನಡೆಯಿತು.
ಸಂಸ್ಥೆ ನಿರ್ದೇಶಕ ಡಾ.ಜೆ.ದಿನಕರ ಅಡಿಗ ಗುಣಮಟ್ಟದ ಗೇರು ಕಸಿ ಗಿಡಗಳ ಉತ್ಪಾದನೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ನರ್ಸರಿಗಳ ಪಾತ್ರ ಮತ್ತು ಗೇರು ಮತ್ತು ಕೋಕೋ ನಿರ್ದೇಶನಾಲಯದ (ಡಿಸಿಸಿಡಿ) ಮಾನ್ಯತೆಯ ಅಗತ್ಯವನ್ನು ತಿಳಿಸಿದರು.
ಸಯಾನ್ ಬ್ಯಾಂಕ್ ಮತ್ತು ಗೇರು ನರ್ಸರಿ ಸ್ಥಾಪನೆ ಮತ್ತು ಅದರ ನಿರ್ವಹಣೆಯನ್ನು ಕುರಿತು ಉಪನ್ಯಾಸ, ಉತ್ತಮ ಗುಣಮಟ್ಟದ ಕಸಿಕಡ್ಡಿ ಸಂಗ್ರಹಣೆ ಮಾಹಿತಿ, ಗೇರಿನಲ್ಲಿ ವಾಣಿಜ್ಯವಾಗಿ ಅಳವಡಿಸಿಕೊಳ್ಳುವ ಮೆದುಕಾಂಡ ಕಸಿ ಕಟ್ಟುವ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು. ಭಾರತ ಅಗ್ರಿ ಡೆವಲಪ್ಮೆಂಟ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ಶೆಟ್ಟಿ, ತರಬೇತಿ ಕಾರ್ಯಕ್ರಮದ ಸಂಯೋಜಕಿ ಡಾ. ಅಶ್ವತಿ ಚಂದ್ರಕುಮಾರ್, ಸಹ-ಸಂಯೋಜಕಿ ಡಾ.ಭಾಗ್ಯ ಎಚ್.ಪಿ., ಹಿರಿಯ ವಿಜ್ಞಾನಿ ಡಾ.ಈರದಾಸಪ್ಪ ಇ. ಉಪಸ್ಥಿತರಿದ್ದರು.