ಜಿಲ್ಲೆ

ಜರ್ಮನಿಯಂತೆ ಬಳ್ಳಾರಿ ಜಿಲ್ಲೆ ಒಂದಾಗಲಿದೆ: ಡಿ.3ರಂದು ಹೋರಾಟಗಾರರ ಭೇಟಿ, ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿಕೆ

Ballari

ಬಳ್ಳಾರಿ: ವಿಜಯನಗರ ಜಿಲ್ಲೆ ಕುರಿತಾಗಿ ಸಿಎಂ ಮತ್ತು ಹಿರಿಯ ಸಚಿವರು ಸಮಾಧಾನ ಪಡಿಸಿದ್ದರೂ ತಣಿಯದ ಬಳ್ಳಾರಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಅಖಂಡ ಬಳ್ಳಾರಿ ಜಿಲ್ಲೆ ಹೋರಾಟಕ್ಕೆ ಬಹಿರಂಗವಾಗೇ ಬೆಂಬಲ ನೀಡಿದ್ದಾರೆ.

ಪೂರ್ವ ಮತ್ತು ಪಶ್ಚಿಮ ಜರ್ಮನಿಗಳು ಒಂದಾದಂತೆ ಮುಂದಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆ ಮತ್ತೆ ಒಂದಾಗಲಿದೆ ಎಂದು ಸೋಮಶೇಖರರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಖಂಡ ಜಿಲ್ಲೆ ಇರಬೇಕೆಂದು ಜಿಲ್ಲೆಯ ಎಲ್ಲ ಶಾಸಕರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ತಿಳಿಸಿದ್ದರೂ ದಿಢೀರನೆ ವಿಜಯನಗರ ಜಿಲ್ಲೆ ೋಷಿಸಿದ್ದಾರೆ. ಜಿಲ್ಲೆ ವಿಭಜನೆಯ ಪರಿಣಾಮದ ಬಗ್ಗೆಯೂ ತಿಳಿಸಲಾಗಿದೆ. ಶೀಘ್ರದಲ್ಲಿ ಮತ್ತೆ ಮುಖ್ಯಮಂತ್ರಿ ಭೇಟಿ ಮಾಡುವೆ. ಡಿ.3ರಂದು ಅಖಂಡ ಜಿಲ್ಲೆ ಹೋರಾಟಗಾರರನ್ನು ಭೇಟಿ ಮಾಡುವುದಾಗಿ ಶಾಸಕ ಸೋಮಶೇಖರರೆಡ್ಡಿ ಶನಿವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.