ಲಿಂಗಸುಗೂರು ಪಟ್ಟಣದ ರಜಪೂತ್ ಸಾಂಸ್ಕೃತಿಕ ಭವನದಲ್ಲಿ ಆಯೋಜಸಿದ್ದ ಮಹಾರಾಣಾ ಪ್ರತಾಪಸಿಂಹ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ರಜಪೂತ್ ಸಮಾಜದ ತಾಲೂಕು ಅಧ್ಯಕ್ಷ ದಶರಥಸಿಂಗ್ ಮಾತನಾಡಿದರು. ಕರ್ನಾಟಕ ಕ್ಷತ್ರೀಯ ಒಕ್ಕೂಟದ ತಾಲೂಕು ಅಧ್ಯಕ್ಷೆ ಶೋಭಾ ಕಟವಾ, ರಜಪೂತ್ ಸಮಾಜದ ಉಪಾಧ್ಯಕ್ಷ ತಿಪ್ಪುಸಿಂಗ್, ಪ್ರಮುಖರಾದ ರಮೇಶ ಸಿಂಗ್, ಸತ್ಯನಾರಾಯಣ ಸಿಂಗ್, ಜಯಸಿಂಗ್, ಸುಧೀರಸಿಂಗ್, ಶ್ರೀವಾತ್ಸವ, ಇಂದ್ರಜಿತ್ ಸಿಂಗ್, ಚಂದಪ್ಪ ಕಟ್ಟಿಮನಿ, ಲಲಿತಾಬಾಯಿ ಇದ್ದರು. 
ಜಿಲ್ಲೆ

ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ

ರುದ್ರಪ್ಪ ವಾಲಿ

ಲಿಂಗಸುಗೂರು: ಭಾರತ ಇತಿಹಾಸ ಕಂಡ ಅಪ್ರತಿಮ ವೀರ, ವೈರಿಗಳಿಗೆ ಸಿಂಹಸ್ವಪ್ನವಾಗಿದ್ದ ಮಹಾರಾಣಾ ಪ್ರತಾಪಸಿಂಹರ ಪರಾಕ್ರಮದ ಬದುಕು ವರ್ಣನೀಯ ಎಂದು ರಜಪೂತ ಸಮಾಜದ ತಾಲೂಕು ಅಧ್ಯಕ್ಷ ದಶರಥಸಿಂಗ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ರಜಪೂತ ಸಮಾಜದಿಂದ ಹಮ್ಮಿಕೊಂಡಿದ್ದ ಮಹಾರಾಣಾ ಪ್ರತಾಪಸಿಂಹ ಅವರ 484ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾರಾಣಾ ಪ್ರತಾಪಸಿಂಹರ ರಕ್ತದ ಕಣಕಣದಲ್ಲೂ ದೇಶಪ್ರೇಮದ ಕಿಚ್ಚು ಮನೆ ಮಾಡಿತ್ತು. ಹಲ್ದಿಘಾಟ್ ಯುದ್ಧದ ಬಳಿಕ ಮೇವಾಡದ ಆಂದೋಲನವು ಜನಾಂದೋಲನವಾಗಿ ಮಾರ್ಪಟ್ಟಿತು ಎಂದರು.

ತಾಯ್ನಡ ರಕ್ಷಣೆಗೆ ಸದಾ ವೈರಿಗಳಲ್ಲಿ ನಡುಕ ಉಂಟು ಮಾಡಿದ್ದ ಮಹಾರಾಣಾ ಪ್ರತಾಪಸಿಂಹರ ಜನ್ಮದಿನವನ್ನು ಸರ್ಕಾರ ಪರಾಕ್ರಮ ದಿನವನ್ನಾಗಿ ಆಚರಿಸಬೇಕು. ಇಂದಿನ ಯುವ ಜನಾಂಗ ಮಹಾರಾಣಾ ಪ್ರತಾಪಸಿಂಹರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ದಶರಥಸಿಂಗ್ ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನದಿಂದ ರಜಪೂತ್ ಸಾಂಸ್ಕೃತಿಕ ಭವನದವರೆಗೆ ಮಹಾರಾಣಾ ಪ್ರತಾಪಸಿಂಹರ ಭಾವಚಿತ್ರ ಮೆರವಣಿಗೆ ನಡೆಸಿದರು.