ಕೊಟ್ಟೂರು ತಾಲೂಕು ಚಪ್ಪರದಹಳ್ಳಿಯಲ್ಲಿ ನಡೆದ ಕಿತ್ತೂರು ರಾಣಿಚನ್ನಮ್ಮ ಜಯಂತಿಯಲ್ಲಿ ಶಾಸಕ ನೇಮಿರಾಜ್ ನಾಯ್ಕ, ಗ್ರಾಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಪ್ರಮುಖರಾದ ಕಡ್ಲಿ ಪ್ರಶಾಂತ, ಡಿಸ್ ಮಂಜುನಾಥ, ರಾಂಪುರ ವಿವೇಕಾನಂದ, ಹುಲ್ಮನಿ ಮಲ್ಲೇಶ, ಭರಮನಗೌಡ ಇತರರಿದ್ದರು. 
ಜಿಲ್ಲೆ

ಮಹಾನೀಯರ ವೃತ್ತ ನಿರ್ಮಿಸಲಾಗುವುದು

ಕೊಟ್ಟೂರು: ಪಂಚಮಸಾಲಿ ಸಮುದಾಯ ಭವನ ಕಟ್ಟಲು ಪಟ್ಟಿ ಎತ್ತಬೇಕಾಗಿಲ್ಲ. ಅದಕ್ಕಾಗಿ ಕೋಟಿ ರೂ. ಅನುದಾನ ಕೊಡುತ್ತೇನೆ ಎಂದು ಶಾಸಕ ನೇಮಿರಾಜ್ ನಾಯ್ಕ ಭರವಸೆ ನೀಡಿದರು.

ತಾಲೂಕಿನ ಚಪ್ಪದರಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಎಲ್ಲಿಂದ ಹಣ ತಂದು ಕ್ಷೇತ್ರ ಅಭಿವೃದ್ಧಿ ಮಾಡ್ತಾರೆ ಎನ್ನುತ್ತಿದ್ದರು.

ಕೆ.ಕೆ.ಆರ್.ಡಿ.ಬಿ. ಮೈನಿಂಗ್, ಪಿಎಂವೈ, ಅಮೃತ ಈ ಯೋಜನೆಗಳ ಅನುದಾನದಿಂದ ಗ್ರಾಮಗಳನ್ನು ವೃದ್ಧಿಸಲಾಗುವುದು. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಿದ್ದರೆ, ಕೊಟ್ಟೂರು ಪಪಂಯನ್ನು ಪುರಸಭೆ ಮಾಡಿ ಚಪ್ಪರದಹಳ್ಳಿಯನ್ನು ಸೇರಿಸುತ್ತೇನೆ. ಕ್ಷೇತ್ರದ ಎಲ್ಲ ಸಮುದಾಯಕ್ಕೂ ನ್ಯಾಯ ಕೊಡಿಸುವುದಲ್ಲದೆ.

ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಕನಕದಾಸರ ಪ್ರತಿಮೆ, ವಾಲ್ಮೀಕಿ ಪ್ರತಿಮೆ, ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆಗೆ ತಲಾ 50 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಭರವಸೆ ನೀಡಿದರು.  ಪಂಚಮಸಾಲಿ ಸಮುದಾಯ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಬಿ.ಕೊಟ್ರಪ್ಪ, ಕಳೆದ 11 ವರ್ಷಗಳಿಂದ ಪಂಚಮಸಾಲಿ ಭವನ ನಿರ್ಮಾಣ ಕುಂಟುತ್ತ ಸಾಗಿದ್ದು, ಶಾಸಕ ನೇಮಿರಾಜ್ ನಾಯ್ಕ ಪೂರ್ಣಗೊಳಿಸಬೇಕೆಂದು ಭಾವಪರವಶವಾಗಿ ವಿನಂತಿಸಿದರು.

ಕಿತ್ತೂರು ರಾಣಿ ಚನ್ನಮ್ಮ ಭಾವಚಿತ್ರವನ್ನು ಟ್ರಾೃಕ್ಟರ್‌ನಲ್ಲಿ ಮೆರವಣೆಗೆ ಮಾಡಲಾಯಿತು. ಮಕ್ಕಳು ಕಿತ್ತೂರು ರಾಣಿ ಚನ್ನಮ್ಮ ಸೇರಿ ಇತರೆ ಸ್ವಾತಂತ್ರ ಹೋರಾಟಗಾರರ ವೇಷಹಾಕಿದ್ದು ಗಮನ ಸೆಳೆಯಿತು. ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ ಹರ್ಷವರ್ಧನ, ಗ್ರಾಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಪ್ರಮುಖರಾದ ಕಡ್ಲಿ ಪ್ರಶಾಂತ, ಡಿಸ್ ಮಂಜುನಾಥ, ರಾಂಪುರ ವಿವೇಕಾನಂದ, ಹುಲ್ಮನಿ ಮಲ್ಲೇಶ, ಭರಮನಗೌಡ, ಬಸಾಪುರ ಪಂಪಾಪತಿ. ಅಂಗಡಿ ಪಂಪಾಪತಿ, ಅಯ್ಯನಹಳ್ಳಿ ಕೊಟ್ರೇಶ, ಶಿವಣ್ಣ ಮೇಷ್ಟ್ರು, ಚಿರಬಿ ಪ್ರಕಾಶ, ವೀರನಗೌಡ, ಮಹಾಶೇಪ್ಪ, ನಿಂಗಪ್ಪ, ಬೂದಿ ಶಿವಕುಮಾರ್, ದೇವರಮನಿ ಉಮಾದೇವಿ, ವೀಣಾ ವಿವೇಕಾನಂದಗೌಡ, ಕರಡಿ ಕೊಟ್ರೇಶ ಇತರರಿದ್ದರು.