ಮಡಿಕೇರಿ: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರು, ಕಾರ್ಗಿಲ್ ಸಮರದ ನೇತೃತ್ವ ವಹಿಸಿದ್ದ ಜನರಲ್ ವೇದ್ ಪ್ರಕಾಶ್ ಮಲ್ಲಿಕ್‌ರವರು ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಬುಧವಾರ ಭೇಟಿ ವೀಕ್ಷಿಸಿದರು.
ಪತ್ನಿ ಡಾ.ಅಂಜನಾ ಮಲ್ಲಿಕ್ ಅವರೊಂದಿಗೆ ಭೇಟಿ ನೀಡಿದ ವಿ.ಪಿ.ಮಲ್ಲಿಕ್‌ರವರು ಸ್ಮಾರಕ ಭವನ ವೀಕ್ಷಿಸಿ ಇಲ್ಲಿನ ವ್ಯವಸ್ಥಿತ ಸಂಗ್ರಹದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಜನರಲ್ ತಿಮ್ಮಯ್ಯ ಅವರ ಸೇನಾ ಜೀವನ ಪ್ರತೀಯೊಬ್ಬ ಭಾರತೀಯನಿಗೂ ಆದರ್ಶಪ್ರಾಯ ಎಂದು ಮಲ್ಲಿಕ್ ಹೇಳಿದರು.
ತಿಮ್ಮಯ್ಯ ಸ್ಮಾರಕ ಭವನದ ವ್ಯವಸ್ಥಾಪಕ ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ, ನಾಯಕ್ ಸುಬೇದಾರ್ ಮೋಹನ್ ಹಾಜರಿದ್ದರು.