ವಿಜಯಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅಧ್ಯೆ ಭವ್ಯಾ ಮಹೇಶ್​, ಉಪಾಧ್ಯೆ ತಾಜುಉನ್ನೀಸಾ ಮಹಬೂಬ್​ ಪಾಷಾ, ಆರೋಗ್ಯಾಧಿಕಾರಿಗಳಾದ ಲಾವಣ್ಯ, ಕಂದಾಯಾಧಿಕಾರಿ ಚಂದ್ರು, ಸಿಬ್ಬಂದಿ ಅನಿಲ್​, ಜನಾರ್ಧನ್​, ಹೇಮಾ ಇದ್ದರು. 
ಜಿಲ್ಲೆ

ಗೊಂದಲದ ಗೂಡಾಗಿ ಸಾಮಾನ್ಯ ಸಭೆ ಮುಂದೂಡಿಕೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ವಿಜಯಪುರ : ಒಂದೂವರೆ ವರ್ಷದ ನಂತರ ಸೋಮವಾರ ಆರಂಭಿಸಲಾದ ಪುರಸಭೆ ಮೊದಲ ಸಾಮಾನ್ಯ ಸಭೆಯು ಬಜೆಟ್​ ಮೇಲಿನ ವಿಷಯದಲ್ಲಿ ಗೊಂದಲದ ಗೂಡಾಗಿ ಮುಂದೂಡಲ್ಪಟ್ಟಿತು.

ಚುನಾಯಿತ ಸದಸ್ಯರ ಸಭೆ ಕರೆಯದೆ ಬಜೆಟ್​ ಮಂಡಿಸಲಾಗಿದೆ. ಬಜೆಟ್​ನ ಆಗು&ಹೋಗುಗಳ ಬಗ್ಗೆ ಸದಸ್ಯರ ಗಮನಕ್ಕೆ ತಾರದೆ, ಸಲಹೆ ಸೂಚನೆಗಳನ್ನು ಪಡೆಯದೆ ಆಡಳಿತಾಧಿಕಾರಿಗಳು, ಮುಖ್ಯ ಅಧಿಕಾರಿಗಳು ಬಜೆಟ್​ ಮಂಡಿಸಿ ಅನುಮೋದಿಸಿರುವುದು ಖಂಡನೀಯ ಎಂದು ಹನಿಫುಲ್ಲಾ ಪ್ರತಿಭಟಿಸಿದ್ದು, ಇತರ ಸದಸ್ಯರೂ ಧ್ವನಿಯಾದರು. ಬಜೆಟ್​ ಮಂಡನೆ ವಿಷಯದಲ್ಲಿ ಸರ್ವ ಸದಸ್ಯರು ವಿಶ್ವಾಸಕ್ಕೆ ಬಾರದ ಕಾರಣ, ಕೂಲಂಕುಷವಾಗಿ ಚರ್ಚಿಸಿ ಮುಂದಿನ ವಾರ ಸಾಮಾನ್ಯ ಸಭೆ ನಡೆಸೋಣ ಎಂದು ಸಭೆ ಆರಂಭವಾದ ಕೆಲ ಕ್ಷಣದಲ್ಲೇ ನೂತನ ಅಧ್ಯೆ ಭವ್ಯಾ ಮಹೇಶ್​ ಸಭೆ ಮುಂದೂಡಿದರು.

ಬಜೆಟ್​ ವಿಷಯವಾಗಿ ಸಾರ್ವಜನಿಕರ ಸಲಹೆ ಸೂಚನೆಗಾಗಿ ಸಭೆ ಕರೆಯಲಾಗಿದ್ದು ಅದರಲ್ಲಿ ಸದಸ್ಯರು ಭಾಗವಹಿಸಬಹುದಾಗಿತ್ತು. ಬಜೆಟ್​ ಅನುಮೋದನೆಯಾಗಿದೆ ಎಂದು ಮುಖ್ಯ ಅಧಿಕಾರಿ ಸಂತೋಷ ಹೇಳಿದರು. ಸದಸ್ಯರಾದ ಬೈರೇಗೌಡ, ನಂದಕುಮಾರ್​ ಮಾತನಾಡಿ, ಬಜೆಟ್​ ತಿದ್ದುಪಡಿ ಮಾಡಲು ಸಾಕಷ್ಟು ಅವಕಾಶಗಳು ಇದ್ದು ಮೊದಲಿಗೆ ಬಜೆಟ್​ ಬಗ್ಗೆ ಸದಸ್ಯರಿಗೆ ಮನವರಿಕೆ ಮಾಡಿ ಲೋಪಗಳಿದ್ದಲ್ಲಿ ಅದನ್ನು ತಿದ್ದುಪಡಿ ಮಾಡಿ ಅನುಮೋದಿಸಬೇಕು ಎಂದರು.

ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಸದಸ್ಯರ ಗಮನಕ್ಕೆ ತಾರದೆ ಬಜೆಟ್​ ಮಂಡನೆ ಮಾಡಿರುವುದು ಸರಿಯಲ್ಲ ಎಂದರು. ಸಿ.ಎಂ.ರಾಮು ಮಾತನಾಡಿ, 13 ಮಂದಿ ಸದಸ್ಯರು ಸಹಿ ಮಾಡಿ ವಿಶೇಷ ಸಭೆ ಕರೆಯಬೇಕೆಂದು ತಿಳಿಸಿದ್ದರೂ ಗಣನೆಗೆ ತೆಗೆದುಕೊಳ್ಳದಿರುವುದು ಸರಿಯಲ್ಲ ಎಂದರು.

ಸದಸ್ಯರಾದ ಎಂ.ಸತೀಶ್​ ಕುಮಾರ್​ ಹಾಗೂ ಕೇಶವಪ್ಪ ಅವರು ಸಭೆ ಹೊರಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಸಲಹೆ ನೀಡಿದಾಗ, ಎಲ್ಲರೂ ಸಭೆಯಿಂದ ಹೊರ ನಡೆದು ಮಾತುಕತೆ ನಡೆಸಿ ಮುಕ್ತಾಯಗೊಳಿಸಿದರು. ಸದಸ್ಯರಾದ ರಾಜಣ್ಣ, ಶಿಲ್ಪಾ ಅಜಿತ್​, ರಾಜೇಶ್ವರಿ ಭಾಸ್ಕರ್​, ಸುಷ್ಮಾ ಮಹೇಶ್​, ಶ್ರೀರಾಮ, ಮಂಜುಳಾ ಮನಿರಾಜು, ಕವಿತಾ ಮುನಿರಾಜು, ರಾಧಮ್ಮ ಪ್ರಕಾಶ್​, ಸಲ್ಮಾ ಖಾನಂ, ರವಿ, ಎಂ.ನಾರಾಯಣಸ್ವಾಮಿ, ವಿಮಲಾ ಬಸವರಾಜು, ಆಯಿಷಾ, ಎಕ್ಬಾಲ್​, ಪುರಸಭಾ ಮ್ಯಾನೇಜರ್​ ಸತ್ಯನಾರಾಯಣ್​, ಅಭಿಯಂತರ ಶೇಖರ್​ ಇದ್ದರು.