ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಸರ್ವೆ ಗ್ರಾಮ ಸಮಿತಿ ಮಹಾಸಭೆಯಲ್ಲಿ ಸಾಧಕರನ್ನು ಗೌರವಿಸಲಾಯಿತು. ರಾಮಕೃಷ್ಣ ಸರ್ವೆದೋಳಗುತ್ತು, ಶಶಿಧರ್, ಚಿದಾನಂದ ಸುವರ್ಣ ಮತ್ತಿತರರು ಇದ್ದರು. 
ಜಿಲ್ಲೆ

ಬಿಲ್ಲವ ಸಂಘದ ಮಹಾಸಭೆ : ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ : ಸ್ಕಾಲರ್‌ಷಿಪ್, ಪುಸ್ತಕ ಉಚಿತ ವಿತರಣೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಸರ್ವೆ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ ಭಕ್ತಕೋಡಿಯಲ್ಲಿ ಇತ್ತೀಚೆಗೆ ನಡೆಯಿತು.

ಗ್ರಾಮ ಸಮಿತಿ ಅಧ್ಯಕ್ಷ ರಾಮಕೃಷ್ಣ ಸರ್ವೆದೋಳಗುತ್ತು ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಸುವರ್ಣ ಉದ್ಘಾಟಿಸಿದರು. ಕೋಶಾಧಿಕಾರಿ ಬಿ.ಟಿ.ಮಹೇಶ್ಚಂದ್ರ ಸಾಲಿಯಾನ್, ಗುರು ಮಂದಿರದ ಆಡಳಿತ ಸಮಿತಿ ಸದಸ್ಯ ಸಜ್ಜನ್ ಕುಮಾರ್ ಕಣ್ಣರ್ನೂಜಿ, ಮುಂಡೂರು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ, ಸದಸ್ಯ ಕಮಲೇಶ್, ಮುಂಡೂರು ಸಹಕಾರಿ ಸಂಘದ ನಿರ್ದೇಶಕ ಆನಂದ ಪೂಜಾರಿ ಕೆ, ಸರ್ವೆ ಭಜನಾ ಮಂದಿರದ ಅಧ್ಯಕ್ಷ ರಾಜೇಶ್, ಮಹಿಳಾ ಘಟಕದ ಅಧ್ಯಕ್ಷೆ ಜಲಜ ಅಶೋಕ ಮಾತನಾಡಿದರು.

ಗ್ರಾಮ ಸಮಿತಿ ಗೌರವಾಧ್ಯಕ್ಷ ಶಶಿಧರ್ ಸ್ವಾಗತಿಸಿದರು. ವೈಶಾಲಿ ಪ್ರವೀಣ್ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಗೌತಮ್ ಪೂಜಾರಿ ವರದಿ ಮಂಡಿಸಿದರು. ಮಹಿಳಾ ಘಟಕ ಕಾರ್ಯದರ್ಶಿ ರಜನಿ ರಾಜೇಶ್ ವಂದಿಸಿದರು. ಚಂಚಲ ಜಯಪ್ರಕಾಶ್ ನಿರೂಪಿಸಿದರು.

ಮುಂಡೂರು ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಅವರನ್ನು ಗೌರವಿಸಲಾಯಿತು. ಶೈಕ್ಷಣಿಕ ಸಾಧಕರಾದ ವಿಜಯ್ ಕುಮಾರ್, ನಿಶಾನ್ ಕುಮಾರ್, ಸಂಜನಾ, ತನ್ನಿ, ಪ್ರತೀಕ್ಷ, ಜನನಿ, ಪ್ರಮಿತ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿ ವೇತನ, ಪುಸ್ತಕ ವಿತರಿಸಲಾಯಿತು.