ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
ಮುಂದಿನ ವರ್ಷಕ್ಕೆ ಸದಸ್ಯತ್ವ ಸಂಖ್ಯೆ ಹೆಚ್ಚಳ, ಸಂಘವನ್ನು ಲಾಭದತ್ತ ಕೊಂಡೊಯ್ಯುವುದು, ಸದಸ್ಯರಲ್ಲಿ ಬ್ಯಾಂಕಿಂಗ್ ವ್ಯವಹಾರ ಹೆಚ್ಚಿಸುವುದಕ್ಕೆ ಒತ್ತು ನೀಡುವುದು ಸೇರಿ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಕೆಂಪಾಪುರ ಅಗ್ರಹಾರದ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಹೇಳಿದರು.
ಕೆಂಪಾಪುರ ಅಗ್ರಹಾರದ ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು.
ಸಿಇಒ ಪಿ.ಬೈರೇಗೌಡ ಮಾತನಾಡಿ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 5.03 ಲಕ್ಷ ರೂ. ವ್ಯಾಪಾರ ಲಾಭ, 1.27 ನಿವ್ವಳ ಲಾಭ ಗಳಿಸಿದೆ. 30 ಲಕ್ಷ ರೂ. ತ್ಯಾಮಗೊಂಡ್ಲು ಬಿಡಿಸಿಸಿ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇಡಲಾಗಿದೆ, ಚಿನ್ನದ ಸಾಲ 89.15 ಲಕ್ಷ ರೂ. ಸಾಲ. ಈ ಬಾರಿ 3.12 ಕೋಟಿ ರೂ. ಬೆಳೆ ಸಾಲ, ಮಧ್ಯಮಾವಧಿ ಸಾಲ 4.52 ಲಕ್ಷ ರೂ. ನೀಡಲಾಗಿದೆ. ಕುಲವನಹಳ್ಳಿ ಶಾಖೆಯಲ್ಲಿ ನಮ್ಮ ಸಂಘದಿಂದ ಸದಸ್ಯರಿಗೆ ಪಶು ಆಹಾರ, ಕುಡಿಯುವ ನೀರಿನ ವ್ಯವಸ್ಥೆ ಆಗಿದೆ, ಈ ಸ್ಟಾಂಪ್ ಸೌಲಭ್ಯ, ಸಂಘದ ಬ್ಯಾಂಕಿನ ವ್ಯವಹಾರ ಪ್ರಾರಂಭವಾಗಿದೆ ಮತ್ತು ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಮರಣ ಹೊಂದಿದ ಸದಸ್ಯರ ಸಹಾಯಧನ ಹೆಚ್ಚಿಸಬೇಕೆಂದು ಸಂಘದ ಸದಸ್ಯ ಜಯರಾಂ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮಂಜುನಾಥ್, ಅಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಬೇರೆಯವರೇ ಹೆಚ್ಚಾಗಿ ರಸಗೊಬ್ಬರ ತೆಗೆದುಕೊಂಡು ಹೋಗುತ್ತಿರುವುದರಿಂದ ಸದಸ್ಯರಿಗೆ ಸಿಗುತ್ತಿಲ್ಲ ಎಂದು ಸದಸ್ಯ ದೂರಿದರು. ಆಗ ಉತ್ತರಿಸಿದ ಸಿಇಒ ಪಿ.ಬೈರೇಗೌಡ ನೆಲಮಂಗಲ ತಾಲೂಕಿನ ಯಾರೇ ಬಂದರೂ ಗೊಬ್ಬರ ನೀಡಬೇಕಾಗುತ್ತದೆ, ಇನ್ನು ಮುಂದೆ ಸದಸ್ಯರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕಗಳಿಸಿದ ಸದಸ್ಯರ 12 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಉಪಾಧ್ಯಕ್ಷ ಕೃಷ್ಣಯ್ಯ, ನಿರ್ದೇಶಕರಾದ ಸಿದ್ದಬೈರಯ್ಯ, ಜಿ.ಗಂಗರಾಜು, ಗಂಗಾಧರಯ್ಯ, ಆರ್.ಮಂಜುನಾಥ್, ಎಸ್.ನಾಗರಾಜು, ಸೂಲ್ಕುಂಟೆ ರಾಮಯ್ಯ, ಗಂಗೇಗೌಡನಪಾಳ್ಯದ ರಾಮಾಂಜಿನಯ್ಯ, ಕೆಂಪಾಪುರ ಅಗ್ರಹಾರದ ಕೆಂಪಗಂಗಮ್ಮ, ಮಹಿಮಾಪುರದ ಜಯಮ್ಮ, ಎಂ. ಮಹೇಶ್, ಮಾಜಿ ಅಧ್ಯಕ್ಷ ರಮೇಶ್, ಷೇರುದಾರ ಕೃಷ್ಣೇಗೌಡ, ಸಿಬ್ಬಂದಿ ಶಶಿಕುಮಾರ್, ಎಂ.ಎಸ್.ಪವನ್‌ಕುಮಾರ್ ಸಿ.ರಾಜು, ಸಿದ್ದಲಿಂಗಯ್ಯ ಇದ್ದರು.