ಜಿಲ್ಲೆ

ಲಿಂಗ ಸಮಾನತೆಯಿಂದ ಸುಂದರ ಸಮಾಜ

Chitradurga

ಚಿತ್ರದುರ್ಗ:ಸುಂದರ ಸಮಾಜದ ನಿರ್ಮಾಣಕ್ಕೆ ಲಿಂಗ ಸಮಾನತೆಯ ಅಗತ್ಯವಿದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿ ದರು. ನಗರದ ಡಯಟ್‌ನಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು,ಹೆಣ್ಣು ಮತ್ತು ಗಂಡು ಜೈವಿಕವಾಗಿ ಭಿನ್ನತೆಯಿದ್ದರೂ ಅವರಲ್ಲಿರುವ ಆತ್ಮ ಚೈತನ್ಯವೊಂದೆಯಾಗಿರುತ್ತದೆ.

ಕುಟುಂಬ ಮತ್ತು ಸಮಾಜದ ಪ್ರಗತಿಯಲ್ಲಿ ಮಹಿಳೆಯ ಪಾತ್ರ ಮುಖ್ಯ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತಾಳೆ. ಪ್ರಸ್ತುತ ದಿನಗಳಲ್ಲಿ ಮಹಿಳೆ ಪುರುಷನಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿದ್ದಾಳೆ. ಜಗತ್ತಿನ ಸಾಧಕರ ಸಾಧನೆ ಹಿಂದೆ ಅವಳ ಪ್ರೋತ್ಸಾಹ,ತ್ಯಾಗವಿದೆ ಎಂದರು. ಉಪ ಪ್ರಾಂಶುಪಾಲ ಡಿ.ಆರ್.ಕೃಷ್ಣಮೂರ್ತಿ,ಸಿ.ಎಸ್.ಲೀಲಾವತಿ,ವಿ.ಕನಕಮ್ಮ,ಗೀತಾ,ರೂಪಾ,ಸೌಭಾಗ್ಯಮ್ಮ,ನಿರ್ಮಲ,ವನಜಾಕ್ಷಮ್ಮ ಇತರರು ಇದ್ದರು.

----