ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಗವರ್ನಮೆಂಟ್ ಇ-ಮಾರ್ಕೆಟ್ ಪ್ಲೇಸ್ (ಜಿಇಎಂ) ಪೋರ್ಟಲ್ ಮೂಲಕ ನಡೆಯುವ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್ಎಂಇ)ಗಳಿಗೆ ಹೆಚ್ಚು ಅನುಕೂಲವಿದೆ ಎಂದು ಜಿಇಎಂ ಕರ್ನಾಟಕ ಮುಖ್ಯಸ್ಥ ದೀಪಕ ಮಹಾದೇವ ಟಿ. ಹೇಳಿದರು.
ಲಘು ಉದ್ಯೋಗ ಭಾರತಿ ಹುಬ್ಬಳ್ಳಿ-ಧಾರವಾಡ ಘಟಕ ಜಿಇಎಂ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, 2023-24ನೇ ಸಾಲಿನಲ್ಲಿ ಜಿಇಎಂ ಪೋರ್ಟಲ್ ಮೂಲಕ ನಡೆದ ಖರೀದಿ ಪ್ರಕ್ರಿಯೆಯು 4 ಲಕ್ಷ ಕೋಟಿ ರೂ. ದಾಟಿದೆ. ಪ್ರತಿ ವರ್ಷ ಇದು ದುಪ್ಪಟ್ಟಾಗುತ್ತಿವೆ. ಇದರಲ್ಲಿ ಎಂಎಸ್ಎಂಇ ಗಳಿಗೂ ಪ್ರಯೋಜನವಿದೆ ಎಂದರು.
ಲಘು ಉದ್ಯೋಗ ಭಾರತಿ ಉಪಾಧ್ಯಕ್ಷ ಶಿವಾನಂದ ಅವಟಿ, ಜಿಲ್ಲಾಧ್ಯಕ್ಷ ಎಸ್.ಸಿ. ಪಾಟೀಲ, ಪ್ರಸಾದ ಪಿ., ಪ್ರಶಾಂತ ಹೆಬಸೂರ, ಹೇಮಾ ಬೆಂತೂರ, ಇತರರು ಇದ್ದರು.