ಜಿಲ್ಲೆ

ಕಲ್ಮಂಜದಲ್ಲಿ ಗೆಳೆಯರ ಬಳಗದ ರಜತ ಸಂಭ್ರಮ ಕಾರ್ಯಕ್ರಮ

Avinash R

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಅಕ್ಷಯನಗರ ನಿಡಿಗಲ್ ಕಲ್ಮಂಜ ಗೆಳೆಯರ ಬಳಗದ ರಜತ ಸಂಭ್ರಮ ಕಾರ್ಯಕ್ರಮ ಕಲ್ಮಂಜ ಗ್ರಾಮದ ಅಕ್ಷಯನಗರದ ಕ್ರೀಡಾಂಗಣದಲ್ಲಿ ನಡೆಯಿತು.

ಬೆಳಗ್ಗೆ ಶ್ರೀ ಸತ್ಯನಾರಾಯಣ ಪೂಜೆ, ಕಲ್ಮಂಜ ಗ್ರಾಮದ ಆಯ್ದ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಿತು. ಅತಿಥಿಗಳನ್ನು, ಸನ್ಮಾನಿತರನ್ನು ವಿವಿಧ ಜಾನಪದ ನೃತ್ಯ ತಂಡದೊಂದಿಗೆ ಬರಮಾಡಿಕೊಳ್ಳಲಾಯಿತು. ಭಾರತೀಯ ಸೇನೆ ನಿವೃತ್ತ ವೀರ ಯೋಧ ಮಂಜುನಾಥ ನಾಯ್ಕ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.

ನಿಡಿಗಲ್ ಶ್ರೀ ಶಾಂತಿನಾಥ ಜೈನ ಬಸದಿ ಆಡಳಿತ ಮೊಕ್ತೇಸರ ರತನ್ ಕುಮಾರ್ ಜೈನ್ ಹುಣಿಪ್ಪಾಜೆ ಗುತ್ತು ಉದ್ಘಾಟಿಸಿದರು. ರಜತ ಸಂಭ್ರಮ ಸಮಿತಿ, ಶ್ರೀ ಸುಬ್ರಾಯ ಅಕ್ಷಯನಗರ ಅಧ್ಯಕ್ಷರು ಗೆಳೆಯರ ಬಳಗದ ಅಧ್ಯಕ್ಷ ಉಮೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಗೆಳೆಯರ ಬಳಗ ಕಟ್ಟಿ ಬೆಳೆಸಿರುವ ಹಿರಿಯ ಸಲಹೆಗಾರ, ಹಿರಿಯ ಸದಸ್ಯರು, ಕಳೆದ 25 ವರ್ಷಗಳಲ್ಲಿ ಬಳಗವನ್ನು ಮುನ್ನಡೆಸಿದ ಎಲ್ಲ ಅಧ್ಯಕ್ಷರು, ಕಾರ್ಮಿಕರಿಂದ ದೇಶದ ಸೈನಿಕರವರೆಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಸಾಧಕರನ್ನು ಗೌರವಿಸಲಾಯಿತು. ರಜತ ಸಂಭ್ರಮದ ಅಂಗವಾಗಿ ನಡೆದ ಕ್ರೀಡಾಕೂಟದ ಬಹುಮಾನ ವಿತರಿಸಲಾಯಿತು.

ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ, ಸಂಚಾಲಕ ನಾಮ್ ದೇವ್ ರಾವ್, ಉಜಿರೆ ಹಳ್ಳಿ ಮನೆ ರೆಸ್ಟೋರೆಂಟ್ ಮಾಲೀಕ ಪ್ರವೀಣ್ ಫರ್ನಾಂಡೀಸ್, ಧರ್ಮಸ್ಥಳ ಆರಕ್ಷಕ ಠಾಣಾ ಸಬ್ ಇನ್ಸ್‌ಪೆಕ್ಟರ್ ಕಿಶೋರ್ ಪಿ., ಉಜಿರೆ ಮಂಜುಶ್ರೀ ಪ್ರಿಂಟರ್ಸ್ ಮ್ಯಾನೇಜರ್ ಶೇಖರ್ ಟಿ., ಬೆಳ್ತಂಗಡಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ವಿಶೇಷ ಸಂಪನ್ಮೂಲ ಶಿಕ್ಷಕಿ ಸೀತಾ ಆರ್.ಶೇಠ್, ಮಂಗಳೂರು ಅಪ್ಪೆ ಕಲ್ಲುರ್ಟಿ ವರ್ತೆ ಸೇವಾ ಸಂಘ ಅಧ್ಯಕ್ಷ ವಿಜಯ್ ಕಾಸರಗೋಡು, ಗೆಳೆಯರ ಬಳಗ ಅಕ್ಷಯನಗರ, ಅಕ್ಷಯ ನಗರ ಸಂಚಾಲಕ ಶೀನ, ಕಲ್ಮಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಹಮೀದ್ ಬಿ.ಎನ್., ಖ್ಯಾತ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ ಉಪಸ್ಥಿತರಿದ್ದರು. ನೆಲ್ಸನ್ ಮೋನಿಸ್ ಅಕ್ಷಯನಗರ, ಯಶೋದಾ ಪಿ.ನಿರೂಪಿಸಿದರು.

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಮಕ್ಕಳು, ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಗೆಳೆಯರ ಬಳಗ ಅಕ್ಷಯನಗರ ಸದಸ್ಯರಿಂದ ಬದ್‌ಕ್‌ದ ಬಿಲೆ ಎಂಬ ತುಳು ನಾಟಕ ಪ್ರದರ್ಶನಗೊಂಡಿತು. ರಾತ್ರಿ 10ರಿಂದ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸಿದ ತುಳು ಹಾಸ್ಯಮಯ ನಾಟಕ ರಂಗಭೂಮಿ ಪ್ರದರ್ಶನಗೊಂಡಿತು.