ಜಿಲ್ಲೆ

ರಾಮಕುಂಜೇಶ್ವರ ವಿದ್ಯಾರ್ಥಿಗಳ ನೃತ್ಯ ರೂಪಕ

ಸೌಮ್ಯ ಆರ್

ಕಡಬ: ಕಡಬ ತಾಲೂಕು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉಡುಪಿಯ ರಾಜಾಂಗಣ ವೇದಿಕೆಯಲ್ಲಿ ನಡೆದ ವಿಶ್ವಗೀತಾ ಪರ್ಯಾಯದ ಬೃಹತ್ ಗೀತೋತ್ಸವ ಕಾರ್ಯಕ್ರಮದಲ್ಲಿ ’ಶ್ರೀ ಕೃಷ್ಣ ಮಹಾನಂದಮ್’ ಎಂಬ ಭಗವದ್ಗೀತೆ ಸಂದೇಶ ನೃತ್ಯ ರೂಪಕ ಪ್ರದರ್ಶಿಸಿದರು.

ಗೀತೋತ್ಸವ ಕಾರ್ಯಕ್ರಮದಲ್ಲಿ 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗೀತೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶ್ರೀ ಕೃಷ್ಣನ ಕೀರ್ತನೆಗಳನ್ನು ಭಜಿಸಿದರು. ಪರ್ಯಾಯ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ವಿದ್ಯಾರ್ಥಿಗಳನ್ನು ಗೌರವಿಸಿದರು.

ಸಂಸ್ಥೆಯ ಕಾರ್ಯದರ್ಶಿ ಕೆ ಸೇಸಪ್ಪ ರೈ ಮಾರ್ಗದರ್ಶನದಲ್ಲಿ ಪ್ರೌಢಶಾಲಾ ಮುಖ್ಯಶಿಕ್ಷಕ ಗಾಯತ್ರಿ ಯು.ಎನ್., ಶಿಕ್ಷಕರಾದ ಸರಿತಾ ಜನಾರ್ದನ್, ಕಿಶೋರ್ ಕುಮಾರ್ ಬಿ., ದಿವ್ಯ, ಸುಜಿತಾ, ಸುಜಾ, ಪ್ರಖ್ಯಾತ್ ಆಳ್ವ ತರಬೇತಿ ನೀಡಿದರು.