ಉಡುಪಿ: ಪರ್ಯಾಯ ಪುತ್ತಿಗೆ ಮಠ, ಜಿಪಂ, ತುಳುಕೂಟ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ, ಲಯನ್ಸ್ ಕ್ಲಬ್, ಸಾಸ್ ಮಹಿಳಾ ಟಕ ಸಹಯೋಗದಲ್ಲಿ ಏ.12ರಿಂದ 22ರವರೆಗೆ ಗೀತಾ ಮಂದಿರದಲ್ಲಿ ಭಾರತೀಯ ಧಾರ್ಮಿಕ ಮತ್ತು ಸಾಂಸತಿಕ ವೈಶಿಷ್ಟ$್ಯಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಭಾರತ ಮೇಳ ಆಯೋಜಿಸಲಾಗಿದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇಳದಲ್ಲಿ ಹಳೆ ಪುಸ್ತಕಗಳು, ಹಳೆ ಜೀವನಪದ್ಧತಿ ಮಾಹಿತಿಗಳು, ತಾಳೆಗರಿ ಗ್ರಂಥಗಳ ಸಹಿತ ಪಾರಂಪರಿಕ ವಸ್ತುಗಳ ಪ್ರದರ್ಶನ, ಕೃತಕ ಆಭರಣ, ಖಾದಿ ಮತ್ತು ಕೈಮಗ್ಗ ವಸ್ತ್ರಗಳ ಭಂಡಾರ, ಕರಕುಶಲವಸ್ತುಗಳು, ಗವ್ಯೋತ್ಪನ್ನಗಳು, ಜ್ಯೋತಿಷ್ಯ, ಖಗೋಳ ಮಾಹಿತಿ, ಮಣ್ಣಿನ ಮಡಿಕೆಗಳು, ವಿಗ್ರಹ, ಗಂಜೀಾ ಚಿತ್ರಕಲಾ ವೈಭವ ಮಳಿಗೆಗಳು ಪ್ರದರ್ಶನದಲ್ಲಿವೆ ಎಂದರು.
ಉದ್ಘಾಟನೆ
12ರಂದು ಸಾಯಂಕಾಲ 4ಗಂಟೆಗೆ ಭಂಡಾರಕೇರಿ ಮಠಾಧೀಶ ವಿದ್ಯೇಶ ತೀರ್ಥ ಸ್ವಾಮೀಜಿ ಮೇಳ ಉದ್ಘಾಟಿಸಲಿದ್ದಾರೆ. ಸಂಸತ ವಿವಿ ಉಪಕುಲಪತಿ ಡಾ. ಅಹಲ್ಯಾ ಮುಖ್ಯ ಅತಿಥಿಗಳಾಗಿರುವರು ಎಂದರು. ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀರಮಣ ಆಚಾರ್ಯ, ತುಳುಕೂಟ ಜಿಲ್ಲಾ ಮಹಿಳಾ ಘಟಕದ ಗೌರವಾಧ್ಯೆ ಉಮಾ ಸುವರ್ಣ, ಅಧ್ಯೆ ತಾರಾ ಉಮೇಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ತಾರಾ ಸತೀಶ್, ಕೋಶಾಧಿಕಾರಿ ಜ್ಯೋತಿ ಸತೀಶ್ ದೇವಾಡಿಗ, ನಗರದ ಅಧ್ಯೆ ಸುಕನ್ಯಾ ಶೇಖರ್, ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಅಧ್ಯಕ್ಷ ಲಕ್ಷಿ$್ಮಕಾಂತ್ ಬೆಸ್ಕೂರ್, ಕೋಶಾಧಿಕಾರಿ ದಿವಾಕರ್ ಶೆಟ್ಟಿ ಬುಡ್ನಾರು, ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ರತ್ನಾಕರ್ ಇಂದ್ರಾಳಿ ಮೊದಲಾದವರು ಉಪಸ್ಥಿತರಿದ್ದರು.