ಜಿಲ್ಲೆ

ಉಲ್ಕಾಪಾತ ವೀಕ್ಷಣೆಗೆ ಸಜ್ಜು

ಸುನಿಲ್ ಪೊನ್ನೇಟಿ

ಮಡಿಕೇರಿ:

'ಕೊಡಗಿನ ಕಾಫಿ ತೋಟದ ಮಧ್ಯೆ ಚಳಿಗಾಲದ ಪ್ರಶಾಂತ ವಾತಾವರಣದಲ್ಲಿ ಕುಳಿತುಕೊಂಡು ಆಕಾಶ ನೋಡೋಣ ಬನ್ನಿ…' ಹೌದು, ಪ್ರವಾಸೋದ್ಯಮದ ಇಂಥದ್ದೊAದು ಹೊಸ ಸಾಧ್ಯತೆಗೆ ಜಿಲ್ಲೆ ಸಾಕ್ಷಿ ಆಗುತ್ತಿದ್ದು, ಮುಂದಿನ ವಾರ ಸಂಭವಿಸಲಿರುವ ಜೆಮಿನಿಡ್ಸ್ ಉಲ್ಕಾಪಾತವನ್ನು ಆಸಕ್ತರಿಗೆ ತೋರಿಸಲು ಖಾಸಗಿ ಪ್ರವಾಸೋದ್ಯಮ ಸಂಸ್ಥೆಯೊAದು ಭರದ ಸಿದ್ಧತೆ ನಡೆಸಿದೆ. ಉಲ್ಕಾಪಾತ ವೀಕ್ಷಣೆಯ ಜತೆಗೆ ಬಾಹ್ಯಾಕಾಶದ ಕೌತುಕ ಅರಿಯುವ ವಿವಿಧ ಚಟುವಟಿಕೆಗಳನ್ನು ಒಳಗೊಂಡAತೆ ಪ್ಯಾಕೇಜ್‌ಗಳನ್ನೂ ರೂಪಿಸಲಾಗಿದ್ದು, ಪ್ರವಾಸಿಗರಿಗೆ ವಿಭಿನ್ನ ಅನುಭವದ ನಿರೀಕ್ಷೆ ಹೊಂದಲಾಗಿದೆ.

ಪ್ರಾಕೃತಿಕ ಸೌಂದರ್ಯದಿAದ ಜಗತ್ತಿನ ಪ್ರವಾಸೋದ್ಯಮದಲ್ಲಿ ಆಕರ್ಷಣೆ ಪಡೆದುಕೊಂಡಿರುವ ಕೊಡಗಿನ ಕಡೆಗೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಸ್ಥಳೀಯ ಪ್ರವಾಸೋದ್ಯಮಿಗಳು ಒಂದಿಲ್ಲೊAದು ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಈ ಪ್ರಯೋಗಗಳಿಗೆ ಕೆಲವು ಸ್ಟಾರ್ಟ್ಅಪ್ ಸಾಹಸಿಗರೂ ಕೈ ಜೋಡಿಸುವುದರಿಂದ ಇಲ್ಲಿ ಹೆಚ್ಚಿನ ಅವಕಾಶದ ಬಾಗಿಲುಗಳು ತೆರೆದುಕೊಳ್ಳುತ್ತಿದೆ. ಕೃಷಿ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಪ್ಲಾಂಟೇಷನ್ ಟೂರ್, ವರ್ಕೇಷನ್ಸ್ನಂತಹ ಪ್ರವಾಸೋದ್ಯಮದ ವಿವಿಧ ಆಯಾಮಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಇಲ್ಲಿ ಈಗ ಬಾಹ್ಯಾಕಾಶದ ಕೌತುಕಗಳನ್ನು ಪರಿಚಯಿಸುವ ಹೊಸ ಮಾದರಿಯ ಪ್ರವಾಸೋದ್ಯಮಕ್ಕೆ ಸಿದ್ಧತೆ ನಡೆದಿದೆ.

ದೇಶದ ಅಸ್ಟೊçà ಟೂರಿಸಂ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪ್ರಮುಖ ಸಂಸ್ಥೆಯೊAದು ಮುಂದಿನ ವಾರ ಸಂಭವಿಸಲಿರುವ ಜೆಮಿನಿಡ್ಸ್ ಉಲ್ಕಾಪಾತವನ್ನು ತನ್ನ ಉದ್ದಿಮೆಯ ಭಾಗವಾಗಿ ಆಸಕ್ತರಿಗೆ ತೋರಿಸಲು ಪೂರ್ವ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಉತ್ತರಾಖಂಡದ ಕೌಸಾನಿ, ಭೀಮ್‌ತಾಲ್, ಮುಕ್ತೇಶ್ವರ್ ಹಾಗೂ ಕರ್ನಾಟಕದಲ್ಲಿ ಕೊಡಗಿನ ಮಡಿಕೇರಿಯಲ್ಲಿ ಜೆಮಿನಿಡ್ಸ್ ಉಲ್ಕಾಪಾತ ವೀಕ್ಷಣೆಗೆ ಈ ಸಂಸ್ಥೆಯಿAದ ವ್ಯವಸ್ಥೆ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
'ಮಡಿಕೇರಿ ಹೃದಯಭಾಗದಲ್ಲಿ ವೀಕ್ಷಣಾಲಯದ ವ್ಯವಸ್ಥೆ ಮಾಡಿದ್ದು, ಆಕಾಶದ ಸಾಹಸಕ್ಕೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ. ಪಟ್ಟಣದಿಂದ ಸ್ವಲ್ಪವೇ ದೂರದಲ್ಲಿ ಕಡಿಮೆ ಬೆಳಕಿನಿಂದ ಕೂಡಿದ ಸ್ವರ್ಗದಂತಹ ಪ್ರಶಾಂತತೆಯ ಜಾಗದಲ್ಲಿ ಕಾಸ್ಮಿಕ್ ಪ್ರಯಾಣದ ಸುಮಧುರ ಅನುಭವವನ್ನು ನೀಡಲಾಗುವುದು. ಈ ವೀಕ್ಷಣಾಲಯ ನಕ್ಷತ್ರ ವೀಕ್ಷಕರು ಮತ್ತು ಖಗೋಳಶಾಸ್ತçದ ಉತ್ಸಾಹಿಗಳಿಗೆ ಅತ್ಯತ್ತಮ ಅವಕಾಶವಾಗಿದೆ. ಇದರ ಜತೆಗೆ ಗಾಲ್ಫ್ ಕೋರ್ಸ್ನ ಸುಂದರವಾದ ನೋಟವನ್ನೂ ಕೊಡುತ್ತದೆ,' ಎಂದು ಅಸ್ಟೊçà ಟೂರಿಸಂನ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.

ಮಡಿಕೇರಿಯಲ್ಲಿ ಪರಂಪರೆ ಮತ್ತು ಆಧುನಿಕತೆಯ ವಿಶಿಷ್ಟ ಮಿಶ್ರಣದಿಂದ ನಿರ್ಮಾಣ ಆಗಿರುವ ವೀಕ್ಷಣಾಲಯ ಕಾಫಿ ಎಸ್ಟೇಟ್ ಜತೆಗೆ ಬಾಹ್ಯಾಕಾಶದ ವಿಶಿಷ್ಟ ಅನುಭವ ನೀಡಲಿದೆ. ಇಲ್ಲಿ ಸ್ವಯಂಚಾಲಿತ ದೂರದರ್ಶಕವಿದ್ದು, ತರಬೇತಿ ಪಡೆದ ತಜ್ಞರು, ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ. ಬ್ರಹ್ಮಾಂಡದ ರಹಸ್ಯಗಳನ್ನು ಆರಾಮವಾಗಿ ಅನ್ವೇಷಿಸಬಹುದಾದ ಎಲ್ಲಾ ಅವಕಾಶಗಳನ್ನೂ ಇಲ್ಲಿ ಕಲ್ಪಿಸಲಾಗಿದೆ. ಬೆಳಕಿನ ಪಯಣದಿಂದ ಆರಂಭವಾಗಿ ಬಾಹ್ಯಾಕಾಶ ತಂತ್ರಜ್ಞಾನ, ರಾಕೆಟ್ ವಿಜ್ಞಾನದ ತನಕ ಮಾಹಿತಿ ನೀಡುವ ಕಾರ್ಯಾಗಾರಗಳನ್ನೂ ನಡೆಸಲಾಗುವುದು.

ಜೆಮಿನಿಡ್ಸ್ ಉಲ್ಕಾಪಾತದ ವೀಕ್ಷಣೆಯ ಜತೆಗೆ ನಕ್ಷತ್ರಪುಂಜ, ಆಕಾಶದಲ್ಲಿ ನಡೆಯುವ ಅಚ್ಚರಿಯ ಚಟುವಟಿಕೆಗಳು, ಸೂರ್ಯನ ಮೇಲಿರುವ ಕಲೆಗಳು, ಸೂರ್ಯನ ಅಗಾಧ ಶಕ್ತಿಯ ಅನುಭವ, ಗ್ರಹಗಳ ಕೌತುಕ, ನಕ್ಷತ್ರಗಳ ಅಚ್ಚರಿಯ ಲೋಕವನ್ನೂ ಆಸಕ್ತರಿಗೆ ಪರಿಚಯಿಸುವ ವ್ಯವಸ್ಥೆಯನ್ನು ಈ ಹೊಸ ಮಾದರಿಯ ಪ್ರವಾಸೋದ್ಯಮದಲ್ಲಿ ಅಳವಡಿಸಿಕೊಳ್ಳಲಾಗಿದೆ. ಪ್ರವಾಸಿಗರ ಅನುಕೂಲತೆಗೆ ತಕ್ಕಂತೆ ವಿವಿಧ ಪ್ಯಾಕೇಜ್‌ಗಳನ್ನು ರೂಪಿಸಲಾಗಿದ್ದು ಕಾಸಿಗೆ ತಕ್ಕ ಕಜ್ಜಾಯ ಎಂಬAತೆ ಹಣದ ಮೌಲ್ಯಕ್ಕೆ ಸರಿಯಾದ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.

ಚಂದ್ರ, ಗ್ರಹಗಳು ಹಾಗೂ ನಕ್ಷತ್ರಗಳ ಬಗ್ಗೆ ಮಾಹಿತಿ ನೀಡುವ ೪೫ ನಿಮಿಷಗಳ ಒಂದು ಪ್ಯಾಕೇಜ್ ಇದ್ದು ರಾತ್ರಿಯ ಆಕಾಶದ ಸಮಗ್ರ ಪರಿಚಯ ಮಾಡಿಕೊಡಲಾಗುತ್ತದೆ. ಆಕಾಶಕ್ಕೆ ಸಂಬAಧಿಸಿದAತೆ ಇರುವ ವಿಜ್ಞಾನ, ಇತಿಹಾಸ ಹಾಗೂ ಪುರಾಣಗಳ ಮಾಹಿತಿ ಕೊಡಲಾಗುತ್ತದೆ. ರಾತ್ರಿಯ ಆಕಾಶದಲ್ಲಿ ವಿವಿಧ ಆಕಾಶಕಾಯಗಳು, ನಕ್ಷತ್ರಪುಂಜಗಳನ್ನು ಗುರುತಿಸುವುದು ಹೇಗೆ ಎನ್ನುವುದನ್ನೂ ತಿಳಿಸಲಾಗುತ್ತದೆ. ಅತ್ಯಾಧುನಿಕ ಪ್ರೀಮಿಯಂ ಟೆಲಿಸ್ಕೋಪ್ ಮೂಲಕ ಆಕಾಶಕಾಯಗಳನ್ನು ನೋಡುತ್ತಾ ಪರಿಣಿತರಿಂದ ಮಾಹಿತಿ ಪಡೆದುಕೊಳ್ಳುವ ಅವಕಾಶವೂ ಇದೆ.

ಈಗಿನ ಪ್ರಮುಖ ಟ್ರೆಂಡ್ ಆಗಿರುವ ಸೆಲ್ಫಿಗೂ ಇಲ್ಲಿ ಅವಕಾಶ ಇದೆ. ಆಕಾಶಕಾಯಗಳು, ನಕ್ಷತ್ರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಾಗ ಸೆಲ್ಫಿ ತೆಗೆದುಕೊಳ್ಳಬಹುದು. ಪ್ರವಾಸಿಗರು ಇಷ್ಟಪಡುವ ನಕ್ಷತ್ರಪುಂಜದೊAದಿಫೋಟೋ ಕೂಡ ತೆಗೆದುಕೊಳ್ಳಬಹುದು. ನಕ್ಷತ್ರಗಳ ಜತೆಗೂ ಫೋಟೋ ಶೂಟ್‌ಗೆ ಅವಕಾಶ ಇದೆ. ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಸಾಫ್ಟ್ ಕಾಪಿಯನ್ನೂ ಕೊಡಲಾಗುತ್ತದೆ. ಮುಂಚಿತವಾಗಿ ಬುಕ್ ಮಾಡಿದಲ್ಲಿ ವ್ಯಯಕ್ತಿಕ ಮತ್ತು ಗುಂಪಿನಲ್ಲಿ ಪ್ರತ್ಯೇಕ ಪಾರ್ಟಿಯ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಆಹಾರ, ಪಾನೀಯದ ಲಭ್ಯತೆಯೂ ಇರುತ್ತದೆ.

ಸೂರ್ಯಾಸ್ತಮಾನಕ್ಕೂ ಮೊದಲಿನ ಚಟುವಟಿಕೆಗಳಲ್ಲಿ ಕಣ್ಣುಗಳಿಗೆ ಯಾವುದೇ ಹಾನಿ ಆಗದಂತೆ ಸೂರ್ಯನ ವೈಭವ ನೋಡುವ ಸವಲತ್ತು ಕೂಡ ಇಲ್ಲಿದೆ. ದೂರದರ್ಶಕ ಮತ್ತು ಅತ್ಯಾಧುನಿಕ ಸೌರ ಫಿಲ್ಟರ್‌ಗಳ ಮೂಲಕ ಸೂರ್ಯನ ಅದ್ಭುತ ಸೌಂದರ್ಯವನ್ನು ಆನಂದಿಸಬಹುದು, ಪಿನ್‌ಹೋಲ್ ಕ್ಯಾಮೆರಾಗಳು, ಬಾಲ್ ಪ್ರೊಜೆಕ್ಟರ್‌ಗಳು ಅಥವಾ ಸೌರ ಕನ್ನಡಕಗಳಂತಹ ಸರಳ ಗೃಹೋಪಯೋಗಿ ಸಾಧನಗಳೊಂದಿಗೆ ಸೂರ್ಯನನ್ನು ಸುರಕ್ಷಿತವಾಗಿ ನೋಡುವುದು ಹೇಗೆ ಎನ್ನುವುದನ್ನೂ ಹೇಳಿಕೊಡಲಾಗುತ್ತದೆ. ಅದೃಷ್ಟವಿದ್ದರೆ ಸನ್‌ಸ್ಪಾಟ್, ಅಸ್ಪಷ್ಟವಾದ ಸೌರ ಜ್ವಾಲೆಗಳನ್ನೂ ನೋಡಬಹುದು.
ರಾಕೆಟ್ ತಂತ್ರಜ್ಞಾನದ ಪರಿಚಯವನ್ನೂ ಇಲ್ಲಿ ಮಾಡಿಕೊಡಲಾಗುತ್ತದೆ. ಮನೆಯಲ್ಲಿ ಉಪಯೋಗಿಸುವ ವಸ್ತುಗಳನ್ನು ಬಳಸಿಕೊಂಡು ರಾಕೆಟ್‌ಗಳ ಮಾದರಿಗಳನ್ನು ರಚಿಸುವುದನ್ನು ಹೇಳಿಕೊಡಲಾಗುತ್ತದೆ. ರಾಕೆಟ್‌ಗಳ ಹಿಂದಿನ ವಿಜ್ಞಾನವನ್ನು ಅರ್ಥೈಸುವ, ಆಸಕ್ತರು ಅವರ ಇಷ್ಟದಂತೆ ಸರಳ ರಾಕೆಟ್ ಮಾಡುವುದನ್ನು ಕಲಿಸಲಾಗುತ್ತದೆ. ಗಾಳಿಯಿಂದ ಉಡಾವಣೆ ಮಾಡುವ, ನೀರಿನೊಂದಿಗೆ ಉಡಾವಣೆ ಮಾಡುವ ರಾಕೆಟ್ ಕಿಟ್ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗುವ ಅವಕಾಶವೂ ಇದೆ.