ಜಿಲ್ಲೆ

ಚುನಾವಣಾ ದೃಷ್ಟಿಯಲ್ಲಿರಿಸಿಕೊಂಡು ವಾರ್ಡ್​ ವಿಂಗಡಣೆ

ಪವನ್ ಆಚಾರ್ಯ ನೀರ್ಚಾಲು

> ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು

ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಐದು ನಗರ ಪಾಲಿಕೆಗಳ ಹೊಸ ವಾರ್ಡ್​ಗಳ ಮರು ವಿಂಗಡಣೆ ಮಾಡಿ, ಕರಡು ಅಧಿಸೂಚನೆಯನ್ನು ನಗರಾಭಿವೃದ್ಧಿ ಇಲಾಖೆ ಮಂಗಳವಾರ ಪ್ರಕಟಿಸಿದೆ. ಆದರೆ, ಚುನಾವಣಾ ದೃಷ್ಟಿ ಇಸಿಕೊಂಡು ಆಡಳಿತಾರೂಢ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ರೀತಿ ರಚಿಸಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಈ ತಿಂಗಳ ಆರಂಭದಲ್ಲಿ ಜಿಬಿಎ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಸಮಿತಿಯಲ್ಲಿ ನಗರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಬಿಎನ ಇನ್ನಿಬ್ಬರು ಹಿರಿಯ ಅಧಿಕಾರಿಗಳು ಸದಸ್ಯರನ್ನು ಸರ್ಕಾರ ನೇಮಿಸಿತ್ತು. ಈ ಸಮಿತಿಯು ಹಲವು ಬಾರಿ ಸಭೆ ನಡೆಸಿ ಪಾಲಿಕೆಗಳ ವ್ಯಾಪ್ತಿಯ ಜನಸಂಖ್ಯೆ, ಜನಸಾಂದ್ರತೆ, ವಿಸ್ತೀರ್ಣ ಹಾಗೂ ಇನ್ನಿತರ ಅಂಶಗಳನ್ನು ಪರಿಗಣಿಸಿ ವಾರ್ಡ್​ಗಳನ್ನು ರಚಿಸಲು ಅವಕಾಶ ಮಾಡಿಕೊಡಲಾಗಿತ್ತು. ಇದೀಗ ಈ ಕಸರತ್ತನ್ನು ಪೂರ್ಣಗೊಳಿಸಿರುವ ಆಯೋಗವು ತನ್ನ ವರದಿಯನ್ನು ಸಲ್ಲಿಸಿದ್ದು, ಅದರ ಆಧಾರದಲ್ಲಿ ಕರಡು ಪ್ರಕಟಿಸಲಾಗಿದೆ. 2011ರ ಜನಗಣತಿ ಆಧಾರದ ಮೇರೆಗೆ ವಿಂಗಡಣೆ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಜನಸಂಖ್ಯೆ ಅಧಿಕವಿರುವ ಪ್ರದೇಶಗಳಲ್ಲಿ ವಾರ್ಡ್​ಗಳ ಸಂಖ್ಯೆ ಅಧಿಕವಾಗಿದೆ. 1996ರಲ್ಲಿ 100ರಷ್ಟು ಇದ್ದ ನಗರದ ವಾರ್ಡ್​ಗಳ ಸಂಖ್ಯೆ ಇದೀಗ 350ರ ಗಡಿ ದಾಟಿ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಗ್ರೇಟರ್​ ಬೆಂಗಳೂರು ಆಡಳಿತ ಅಧಿನಿಯಮದಂತೆ ರಚಿಸಲಾದ ಪೂರ್ವ, ಪಶ್ಚಿಮ, ಉತ್ತರ, ದಣ ಹಾಗೂ ಕೇಂದ್ರ ಎಂಬ 5 ಪಾಲಿಕೆಗಳಲ್ಲಿ ವಾರ್ಡ್​ವಾರು ಕ್ಷೇತ್ರ ಪುನರ್​ ವಿಂಗಡಣೆ ನಡೆದಿದ್ದು, ಪೂರ್ವದಲ್ಲಿ ಅತೀ ಕಡಿಮೆ 50 ವಾರ್ಡ್​, ಪಶ್ಚಿಮದಲ್ಲಿ ಅತ್ಯಧಿಕ 111 ವಾರ್ಡ್​ಗಳನ್ನು ಗುರುತಿಸಲಾಗಿದೆ. ದಣ ಹಾಗೂ ಉತ್ತರದಲ್ಲಿ ವಾರ್ಡ್​ಗಳ ಸಂಖ್ಯೆ ಸಮ ಬಲವಿದ್ದು (72), ಕೇಂದ್ರ ಪಾಲಿಕೆ ವ್ಯಾಪ್ತಿ ಪ್ರದೇಶ ಎಲ್ಲಕ್ಕಿಂತ ಕಡಿಮೆ ಇದ್ದರೂ ಜನಸಂಖ್ಯೆ ಅತ್ಯಧಿಕವಿರುವುದರಿಂದ 63 ವಾರ್ಡ್​ಗಳಾಗಿ ವಿಂಗಡಿಸಲಾಗಿದೆ.

ವಿಂಗಡಣೆ ಅವೈಜ್ಞಾನಿಕ: ಈಗಾಗಲೇ ವಾರ್ಡ್​ವಾರು ವಿಂಗಡಣೆಯ ಕರುಡು ಪ್ರತಿಯಂತೆ ಪಾಲಿಕೆಗಳ ಮಧ್ಯೆ ವಾರ್ಡ್​ಗಳ ವಿಂಗಡಣೆ ನಿಜಕ್ಕೂ ಅವೈಜ್ಞಾನಿಕವಾಗಿದ್ದು, ಒಂದೇ ವಿಧಾನಸಭಾ ಕ್ಷೇತ್ರ 3 ವಾರ್ಡ್​ಗಳಿಗೆ ಸಂಬಂಧಪಡುತ್ತದೆ ಎಂದರೆ ಹೇಗೆ ಒಪ್ಪಲು ಸಾಧ್ಯ ಎಂದು ಪ್ರತಿಪಕ್ಷ ಟೀಕೆ ಮಾಡಿದೆ. ಪ್ರತಿ ಪಾಲಿಕೆಯಲ್ಲಿನ ವಾರ್ಡ್​ಗಳ ಸಂಖ್ಯೆ ಮಧ್ಯೆ ಇರುವ ವ್ಯತ್ಯಾಸವೂ ಈ ಅವೈಜ್ಞಾನಿಕ ವಿಂಗಡಣೆಗೆ ಸಾ ಎಂದಿದೆ.

ಗಣ್ಯರ ಹೆಸರು: ಧರ್ಮ ಹಾಗೂ ಜಾತಿ ಕೇಂದ್ರಿತವಾಗಿ ಇದ್ದ ಕೆಲವು ವಿವಾದಾತ್ಮಕ ಹೆಸರುಗಳನ್ನು ಬದಲಾಯಿಸಿ ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ$್ಯಹೋರಾಟಗಾರರ ಹೆಸರು, ದೇಶದ ನಾಯಕರ ಹೆಸರು, ಕವಿಗಳ, ಮಹಾರಾಜರುಗಳ ಹೆಸರನ್ನು ಇಟ್ಟಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪ್ರತಿಪಕ್ಷವೂ ಈ ಕುರಿತು ಯಾವುದೇ ಚಕಾರ ಎತ್ತಿಲ್ಲ. ಉದಾಹರಣೆಗೆ ಅಬ್ದುಲ್​ ಕಲಾಂ ನಗರ, ಕೆ.ಎಸ್​.ನಿಸಾರ್​ ಅಹಮದ್​ ವಾರ್ಡ್​, ವಿಶ್ವ ಮಾನವ ಕುವೆಂಪು ವಾರ್ಡ್​, ಕೆಂಗಲ್​ ಹನುಮಂತಯ್ಯ ವಾರ್ಡ್​, ಅಬ್ದುಲ್​ ಕಲಾಂ ಆಜಾದ್​ ವಾರ್ಡ್​, ಬಾಲಗಂಗಾಧರ ವಾರ್ಡ್​, ಜಯ ಚಾಮರಾಜೇಂದ್ರ ವಾರ್ಡ್​, ನಾಲ್ವಡಿ ಕೃಷ್ಣರಾಜ ಒಡೆಯರ್​ ವಾರ್ಡ್​, ಅರುಣಾ ಆಸ್​ಿ ಅಲಿ ವಾರ್ಡ್​, ಸುಭಾಷ್​ಚಂದ್ರ ಬೋಸ್​ ವಾರ್ಡ್​, ದೇವರಾಜ ಅರಸು ವಾರ್ಡ್​, ಪಿ.ವಿ.ಗುಂಡಪ್ಪ ವಾರ್ಡ್​, ಡಾ.ಪುನೀತ್​ ರಾಜಕುಮಾರ್​ ವಾರ್ಡ್​ ಇತ್ಯಾದಿ ನೂತನ ಹೆಸರುಗಳೊಂದಿಗೆ ವಾರ್ಡ್​ಗಳಿಗೆ ನಾಮಕರಣ ಮಾಡಲಾಗಿದೆ.

ಅಧಿಸೂಚನೆ ಹೊರಡಿಸಲು ವಿಳಂಬ

ವೇಳಾ ಪಟ್ಟಿಯ ಪ್ರಕಾರ ವಾರ್ಡ್​ ಪುನರ್​ ವಿಂಗಡಣೆ ಆಯೋಗ ಸೆ.23ರಂದು ವರದಿ ಸಲ್ಲಿಸಿ, ಸರ್ಕಾರ ಸೆ.26ಕ್ಕೆ ಕರಡು ಅಧಿಸೂಚನೆ ಹೊರಡಿಸಬೇಕಿತ್ತು. ಪುನರ್​ ವಿಂಗಡಣೆ ಆಯೋಗ ತಡವಾಗಿ ಅಂದರೆ ಸೆ.30ಕ್ಕೆ ವರದಿ ಸಲ್ಲಿಸಿದೆ. ವರದಿ ಸಲ್ಲಿಸಲು ವಿಳಂಬವಾದ ಹಿನ್ನೆಲೆಯಲ್ಲಿ ಕರಡು ಅಧಿಸೂಚನೆ ಹೊರಡಿಸುವುದು ತಡವಾಗಿದೆ.

ಎಷ್ಟು ವಾರ್ಡ್​ನಲ್ಲಿ ಚುನಾವಣೆ? ಮೊದಲಿನ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 198 ವಾರ್ಡ್​ಗಳು ಇದ್ದವು. ಈಗ ಗ್ರೇಟರ್​ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 5 ಪಾಲಿಕೆ ರಚಿಸಿ, 368 ವಾರ್ಡ್​ ರಚಿಸಿಸಲಾಗಿದ್ದು, ಆಡಳಿತ ಕಾರ್ಯ ಪದ್ಧತಿ ಹಲವು ಹಂತದಲ್ಲಿ ಬದಲಾಗಲಿದೆ. ಇದುವರೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಸಹಿತ ಪ್ರಮುಖರು ಪಾಲಿಕೆ ಚುನಾವಣೆ ಹಳೆಯ ಅಂದರೆ 198 ವಾರ್ಡ್​ಗಳಿಗೆ ನಡೆಯಲಿದೆ ಎಂದು ಹೇಳಿದ್ದರು. ಆದರೆ ಈಗ 368 ವಾರ್ಡ್​ ರಚನೆಯಾಗಿದ್ದು ಪಾಲಿಕೆ ಚುನಾವಣೆ ಹೊಸ ವಾರ್ಡ್​ ಅನುಸಾರವೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಐದು ನಗರ ಪಾಲಿಕೆಗಳ ವಾರ್ಡ್​ವಾರು ಕ್ಷೇತ್ರ ಪುನರ್​ ವಿಂಗಡಣೆ ಕರಡು ಹೊರಬಂದಿದೆ. ಈ ಹಿಂದೆ ಇದ್ದ ಮಹಾ ನಗರ ಪಾಲಿಕೆಯ ಆಡಳಿತ 5 ಪಾಲಿಕೆಗಳಾಗಿ ವಿಭಜನೆಗೊಂಡಾಗಿದ್ದು, ಇದೀಗ ಕೊನೆಯ ಹಂತದಲ್ಲಿದೆ. 1990ರಲ್ಲಿ ನಾನು ಗೆದ್ದಾಗ 87 ವಿಭಾಗಗಳಿದ್ದವು. 1996ರಲ್ಲಿ 100 ವಾರ್ಡ್​ಗಳಾಗಿತ್ತು. 2015ರಲ್ಲಿ ಬಿಬಿಎಂಪಿಯಲ್ಲಿ 198 ವಾರ್ಡ್​ಗಳಿದ್ದು. ಇದೀಗ ವಾರ್ಡ್​ಗಳ ಸಂಖ್ಯೆ ದುಪ್ಪಟ್ಟಾಗಿದೆ. > ಪದ್ಮಾವತಿ, ಮಾಜಿ ಮೇಯರ್​ ಐದು ನಗರ ಪಾಲಿಕೆಗಳ ವಾರ್ಡ್​ವಾರು ಕ್ಷೇತ್ರ ಪುನರ್​ ವಿಂಗಡಣೆ ಅವೈಜ್ಞಾನಿಕವಾಗಿದೆ. ಚುನಾವಣೆಯನ್ನು ಮುಂದಿಟ್ಟುಕೊಂಡು ವಿಂಗಡಣೆಯನ್ನು ಮಾಡಲಾಗಿದೆ. ಪಶ್ಚಿಮದಲ್ಲಿ ಅಧಿಕ ಪೂರ್ವದಲ್ಲಿ ಕಡಿಮೆ ವಾರ್ಡ್​ ಸಂಖ್ಯೆಯಲ್ಲೇ ಅವೈಜ್ಞಾನಿಕತೆ ಇದೆ. ಒಂದೇ ವಿಧಾನಸಭಾ ಕ್ಷೇತ್ರ ಮೂರು ವಾರ್ಡ್​ಗೆ ಒಳಪಟ್ಟಿರುವುದು ವಿಶೇಷ. ಈ ಮಾದರಿಯು ವಿಲವಾಗಿದೆ. ಇದರಿಂದ ಕೆಲವು ಐಎಎಸ್​ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆ ತಂದು ಕೆಲಸ ಕೊಡಬಹುದು ಬಿಟ್ಟರೆ ತಳಮಟ್ಟದಲ್ಲಿ ಆಡಳಿತದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. > ಹರೀಶ್​, ಮಾಜಿ ಮೇಯರ್​