ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಸಮೀಕ್ಷೆ ಪ್ರಾರಂಭದಿಂದ ಈವರೆಗೆ 5.91 ಲಕ್ಷ ಮನೆಗಳ ಸಮೀಕ್ಷೆ ನಡೆಸಲಾಗಿದೆ.
ಕೇಂದ್ರ ನಗರ ಪಾಲಿಕೆಯಲ್ಲಿ 22,601 ಮನೆಗಳು, ಪೂರ್ವ ಪಾಲಿಕೆ &25,722, ಉತ್ತರ ಪಾಲಿಕೆ&41,610, ದಕ್ಷಿಣ ಪಾಲಿಕೆ&30,582, ಪಶ್ಚಿಮ ಪಾಲಿಕೆ&53,159 ಮನೆಗಳ ಸಮೀೆ ಈಗಾಗಲೇ ಪೂರ್ತಿಗೊಂಡಿದೆ.
ಬುಧವಾರ ಐದು ನಗರ ಪಾಲಿಕೆಗಳಲ್ಲಿ ಸಂಜೆ 7.30 ಗಂಟೆಯವರೆಗೆ 1,73,674 ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ.
ಮಾಹಿತಿ ನೀಡಲು ಹಿಂದೇಟು: ಸಮೀಾದಾರರು ನಗರದ ವಿವಿಧ ಸ್ಲಮ್ಗಳಲ್ಲಿ ಸಮೀೆಗೆಂದು ಹೋದ ಸಂದರ್ಭ ಕೆಲವು ಕಡೆ ಜನ ಮಾಹಿತಿ ನೀಡಲು ಹಿಂದೇಟು ಹಾಕುವುದು ಕಂಡುಬಂದಿದೆ. ತಾವು ನೀಡುವಂತಹ ಮಾಹಿತಿ ಎಲ್ಲಿ ದುರ್ಬಳಕೆಯಾಗುತ್ತದೋ ಅಥವಾ ಮಾಹಿತಿ ಕೊಟ್ಟಲ್ಲಿ ತಮಗೆ ಸಮಸ್ಯೆ ಎದುರಾಗುತ್ತದೆ ಎಂಬ ಭಯ ಅವರಲ್ಲಿ ಕಾಡುತ್ತಿದೆ ಎಂದು ಸಮೀಾದಾರರು ತಮ್ಮ ಅನುಭವಗಳನ್ನು ಹೇಳಿದ್ದಾರೆ.
ಮನೆಯಲ್ಲಿ ತಮ್ಮ ಬಳಿ ಇರುವ ದನಗಳು, ಮೇಕೆಗಳು, ಕುರಿಗಳು ಮತ್ತು ಕೋಳಿಗಳ ಸಂಖ್ಯೆಯ ಬಗ್ಗೆ ಕೇಳಿದಾಗ ಜನ ನಗೆಗಡಲಲ್ಲಿ ತೇಲಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಇತ್ತೀಚಿನ ಸೂಚನೆಯ ಪ್ರಕಾರ, ಚಿನ್ನದ ಮಾಲೀಕತ್ವದ ಬಗ್ಗೆ ಪ್ರಶ್ನೆಗಳನ್ನು ಬಿಟ್ಟುಬಿಡುವಂತೆ ಹೇಳಿದ್ದು, ಸಮೀಾದಾರರು ಅದೇ ರೀತಿಮಾಡುತ್ತಿದ್ದಾರೆ.
ಪೂರ್ಣ ಮಾಹಿತಿ ಪಡೆದಿಲ್ಲ: ಆರ್.ಆರ್.ನಗರದ ನಿವಾಸಿಯೊಬ್ಬರು ಆಧಾರ್, ಆಸ್ತಿ ವಿವರಗಳು ಮತ್ತು ವಾಹನಗಳು ಸೇರಿದಂತೆ ನನ್ನ ಮನೆಯ ಬಗ್ಗೆ ಎಲ್ಲ ಮಾಹಿತಿಯನ್ನು ಪಡೆದುಕೊಂಡರು. ಆದರೆ ನನ್ನ ವೃದ್ಧ ತಂದೆ ಸೇರಿದಂತೆ ನನ್ನ ಕುಟುಂಬ ಸದಸ್ಯರ ಪೂರ್ಣ ಮಾಹಿತಿ ಇಲ್ಲ. ಇಂತಹ ಸಮಸ್ಯೆಗಳನ್ನು ಹೇಗೆ ಸರಿಪಡಿಸುವುದು ಎಂದು ಪ್ರಸ್ನಿಸಿದ್ದಾರೆ.