ಜಿಲ್ಲೆ

ತಪೋಭೂಮಿಯಲ್ಲಿ ವಾರ್ಷಿಕೋತ್ಸವ

Dharwada - Basavaraj Idli

ಹುಬ್ಬಳ್ಳಿ: ಶಿಗ್ಗಾಂವಿ ತಾಲೂಕಿನ ತಡಸದ ಶ್ರೀ ಗಾಯತ್ರಿ ತಪೋಭೂಮಿಯ 25ನೇ ವಾರ್ಷಿಕೋತ್ಸವ ಸಮಾರಂಭ ಫೆ. 10ರಂದು ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 9ರಿಂದ ಸಂಜೆ ವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಹೋಮ ಹವನ, ಗಾಯತ್ರಿ ದೇವಿಗೆ ಮಹಾಭಿಷೇಕ ನಡೆಯಲಿವೆ. ಶ್ರೀ ಶಂಕರಾಚಾರ್ಯ ಕೂಡಲಿ ಶೃಂಗೇರಿ ಮಹಾಸಂಸ್ಥಾನ ದಕ್ಷಿಣಾಮ್ನಯ ಶಾರದಾಪೀಠದ ಶ್ರೀಮದ್ ಜಗದ್ಗುರು 72ನೇ ಪೀಠಾಧಿಪತಿ ಶ್ರೀ ಅಭಿನವ ಶಂಕರ ಭಾರತಿ ಸ್ವಾಮೀಜಿ ಅನುಗ್ರಹ ಸಂದೇಶ ನೀಡುವರು.

ವಿವಿಧ ಮಠಾಧೀಶರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು ಎಂದು ಶ್ರೀ ಗಾಯತ್ರಿ ತಪೋಭೂಮಿ ಚಾರಿಟಬಲ್ ಟ್ರಸ್ಟ್ ಪ್ರಕಟಣೆ ತಿಳಿಸಿದೆ.