ಜಿಲ್ಲೆ

ಕೊಡೆತ್ತೂರು ದೇವಸ್ಯ ಮಠದಲ್ಲಿ ಗಾಯತ್ರೀ ಜಪ

ಸೌಮ್ಯ ಆರ್

ಕಿನ್ನಿಗೋಳಿ: ಚಿತ್ರಾಪುರದಲ್ಲಿ ನಡೆಯಲಿರುವ ಕೋಟಿ ಗಾಯತ್ರೀ ಜಪಯಜ್ಞದ ಪ್ರಯುಕ್ತ ಶಿವಳ್ಳಿ ಸ್ಪಂದನ ಕಟೀಲು ವಲಯ ವತಿಯಿಂದ ಪರಿಸರದ ಮಠಗಳಲ್ಲಿ ಗಾಯತ್ರೀ ಜಪ ಸಪ್ತಾಹ ಸರಣಿ ಅಂಗವಾಗಿ ಕಿನ್ನಿಗೋಳಿ ಕೊಡೆತ್ತೂರು ದೇವಸ್ಯ ಮಠ ಶ್ರೀನಿವಾಸ ದೇವರ ಸನ್ನಿಧಿಯಲ್ಲಿ ಜಪ ಜರುಗಿತು.

ದೇವಸ್ಯ ಮಠದ ಮುಖ್ಯಸ್ಥ ವೇದವ್ಯಾಸ, ಸುಧಾ ಉಡುಪ ದಂಪತಿಯಿಂದ ಫಲನ್ಯಾಸ, ಅಧ್ಯಕ್ಷ ಅನಂತಪದ್ಮನಾಭ ಅವರಿಂದ ಪ್ರಾರ್ಥನೆ ನೆರವೇರಿತು. ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರ್ ಯಾಗದ ವಾಹಿತಿ ನೀಡಿದರು.

ರಾಮಚಂದ್ರ ಉಡುಪ, ಡಾ.ಗುರುರಾಜ್ ಉಡುಪ, ಸುರೇಶ್ ರಾಜ್, ವೆಂಕಟಕೃಷ್ಣ, ರಮೇಶ್ ಭಟ್, ಸುರೇಶ್ ರಾವ್, ಅನಂತ ಭಟ್, ಸಂತೋಷ್ ಕೈಯ್ಯೂರು, ಅಶೋಕ್ ರಾವ್, ನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.