ಬೆನ್ನೂರು ಗ್ರಾಮಸ್ಥರು ಕೊಪ್ಪಳ ಗವಿಮಠಕ್ಕೆ 20 ಕ್ವಿಂಟಾಲ್ ಅಕ್ಕಿಯನ್ನು ಕಳುಹಿಸಿದರು. ಪ್ರಮುಖರಾದ ಸಂಗಪ್ಪ ಪೂಜಾರಿ, ವಿಶ್ವನಾಥ ಸ್ವಾಮಿ, ಶರಣಪ್ಪ ಮಸ್ಕಿ, ಸಿದ್ದನಗೌಡ ಮಾಲಿ ಪಾಟೀಲ್, ವಿರೂಪಾಕ್ಷಗೌಡ, ಯಂಕಪ್ಪ ಕುಂಬಾರ, ಬಸವರಾಜ ಈಡಿಗೇರ್, ಲಕ್ಕಪ್ಪ ಕುರುಬರು ಇತರರಿದ್ದರು. 
ಜಿಲ್ಲೆ

ಗವಿಮಠ ದಾಸೋಹಕ್ಕೆ 20 ಕ್ವಿಂಟಾಲ್ ಅಕ್ಕಿ ದೇಣಿಗೆ

ಸಿದ್ದಾಪುರ: ಸಮೀಪದ ಬೆನ್ನೂರು ಗ್ರಾಮಸ್ಥರು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ದಾಸೋಹಕ್ಕೆ ಬುಧವಾರ 20 ಕ್ವಿಂಟಾಲ್ ಅಕ್ಕಿಯನ್ನು ದೇಣಿಗೆಯಾಗಿ ನೀಡಿದರು.


ಗ್ರಾಮಸ್ಥ ಸೋಮಯ್ಯಸ್ವಾಮಿ ಮಾತನಾಡಿ, ಗವಿಸಿದ್ಧೇಶ್ವರ ಮಠ ಅನ್ನ, ಅಕ್ಷರ, ಆರೋಗ್ಯ ಎಂಬ ತ್ರಿವಿಧ ದಾಸೋಹಕ್ಕೆ ಹೆಸರಾಗಿದೆ. ಜ್ಞಾನ ದಾಸೋಹ ಮತ್ತು ಸಾಮಾಜಿಕ ಕಳಕಳಿಯ ಶಕ್ತಿ ಕೇಂದ್ರಗಳಲ್ಲಿ ಒಂದಾಗಿದೆ. ಅಲ್ಲದೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಿದೆ. ಜಾತ್ರೆಗೆ ಗ್ರಾಮದಿಂದ ಮಠಕ್ಕೆ 20 ಕ್ವಿಂಟಾಲ್ ಅಕ್ಕಿ ದೇಣಿಗೆಯಾಗಿ ನೀಡಲಾಗಿದೆ ಎಂದು ತಿಳಿಸಿದರು.